ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಾಪಕರೆ ಗೊಡ್ಡು ಬೆದರಿಕೆಗೆ ಹೆದರಬೇಡಿ

By * ಯುಆರ್ ಅನಂತಮೂರ್ತಿ,
|
Google Oneindia Kannada News

UR Ananthmurthy
ಮಾನ್ಯ ವಿದ್ಯಾಮಂತ್ರಿಯವರು ಹಂಪಿ ವಿಶ್ವವಿದ್ಯಾಲಯದ ಶಿಕ್ಷಕರ ಅಶಿಸ್ತನ್ನು ತಾನು ಸಹಿಸಲಾರನೆಂದು ಅವರನ್ನು ತಾನು ಶಿಕ್ಷಿಸುವೆನಂದೂ ಗದರಿದ್ದಾರೆ ಪ್ರಜಾತಾಂತ್ರಿಕವಾದ ಮಿತಿಗಳಲ್ಲಿ ಕೆಲಸ ಮಾಡಬೇಕಾದ ಮಂತ್ರಿಯೊಬ್ಬರು ಹೀಗೆ ಕೊಚ್ಚಿಕೊಂಡು ಅಧ್ಯಾಪಕರನ್ನು ಗದರಿಸುವಂತಿಲ್ಲ. ವಿಶ್ವವಿದ್ಯಾಲಯದ ಶಿಕ್ಷಕರನ್ನು ಶಿಕ್ಷಕರನ್ನು ದಂಡಿಸುವ ಅಧಿಕಾರವಾಗಲಿ, ಅರ್ಹತೆಯಾಗಲೀ ಅವರಿಗೆ ಇಲ್ಲ.

ಒಂದು ಕಾಲದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷನೂ ಕೇರಳದ ಒಂದು ವಿಶ್ವವಿದ್ಯಾಲಯದ ಕುಲಪತಿಯೂ ಆಗಿದ್ದು, ನನಗೆ ಗೊತ್ತಿರುವುದನ್ನು ಹೇಳಬಯಸುತ್ತೇನೆ. ಅಧ್ಯಾಪಕರನ್ನು ಶಿಕ್ಷಿಸುವ ಅಧಿಕಾರವಿರುವುದು ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಮಾತ್ರ. ಮಾನ್ಯ ಮಂತ್ರಿಗಳು ಕುಲಪತಿಗಳಿಗೆ ಅಧ್ಯಾಪಕರನ್ನು ಶಿಕ್ಷಿಸುವಂತೆ ಆದೇಶವನ್ನೂ ಕೊಡುವಂತಿಲ್ಲ. ಏಕೆಂದರೆ ಕುಲಪತಿಯನ್ನು ಆಯ್ಕೆ ಮಾಡಿದ್ದು ಕುಲಾಧಿಪತಿ ಅಥವಾ ರಾಜ್ಯಪಾಲರು.

ಎಡಪಂಥೀಯ ಸರಕಾರವೊಂದು ಕೇರಳದಲ್ಲಿ ಅಧಿಕಾರದಲ್ಲಿದ್ದಾಗ ಕುಲಪತಿಯಾಗಿದ್ದ ನಾನು ಚೀನಾಕ್ಕೆ ಹೋಗಿದ್ದೆ. ತೀಯಾನ್ಮನ್ ವೃತ್ತದಲ್ಲಿ ಪ್ರಜಾತಂತ್ರ ವ್ಯವಸ್ಥೆಗಾಗಿ ಹೋರಾಡುತ್ತಿದ್ದ ವಿದ್ಯಾರ್ಥಿ ಸಮೂಹದ ಅನೇಕರನ್ನು ಚೀನಾದ ಸೈನ್ಯ ನಾನು ಅಲ್ಲಿ ಇದ್ದಾಗಲೇ ಗುಂಡಿಟ್ಟು ಕೊಂದಿತು. ಚೀನಾದಿಂದ ಹಿಂದಿರುಗಿದ ನಂತರ ಚೀನಾದ ಈ ವರ್ತನೆಯನ್ನು ಖಂಡಿಸಿ ಹಲವಾರು ಲೇಖನವನ್ನು ಬರೆದೆ.

ಆದರೆ, ಅಂದಿನ ಇ ಕೆ ನಾಯನಾರ್ ನೇತೃತ್ವದ ಕಮ್ಯುನಿಷ್ಟ್ ಸರಕಾರ ನನ್ನ ವಾದವನ್ನು ಒಪ್ಪದಿದ್ದರೂ ನನ್ನ ವೈಚಾರಿಕ ಸ್ವಾತಂತ್ರ್ಯವನ್ನು ಪ್ರಶ್ನಿಸಿರಲಿಲ್ಲ. ಸಂಘ ಪರಿವಾರದ ಮಂತ್ರಿಯೊಬ್ಬರು ಈ ಘಟನೆಯಿಂದ ಪಾಠವಿದೆ. ಹಂಪಿ ವಿವಿ ಅಧ್ಯಾಪಕರ ಹೋರಾಟಕ್ಕೆ ನನ್ನ ಬೆಂಬಲ ಸೂಚಿಸಲೂ ಮಂತ್ರಿಗಳ ಮಾತಿಗೆ ಯಾರೂ ಹೆದರಬೇಕಿಲ್ಲ ಎಂದು ಸ್ಪಷ್ಟಪಡಿಸಲೂ ಮೇಲಿನ ಮಾತುಗಳನ್ನು ಹೇಳುತ್ತ ಇದ್ದೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X