ಯಡಿಯೂರಪ್ಪನನ್ನ ಕೆಳಗಿಳಿಸುವುದು ಅಸಾಧ್ಯ
ಬೆಂಗಳೂರು,
ಫೆ. 28 : ವೀರೇಂದ್ರ ಪಾಟೀಲ್ ಅವರನ್ನು ಕೆಳಗಿಸಿದಷ್ಟು ಸುಲಭವಲ್ಲ ಈ ಯಡಿಯೂರಪ್ಪನನ್ನ ಕೆಳಗಿಳಿಸುವುದು. 68ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ದಾಳಿಯ ಪರಿಯಿದು. id="toptextpromo"> ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜನಾಭಿವೃದ್ಧಿ ಕಾರ್ಯ ಮಾಡುತ್ತಿರುವ ಬಿಜೆಪಿ ಸರಕಾರವನ್ನು ಉರುಳಿಸಲು ಪ್ರತಿಪಕ್ಷಗಳು ಸಂಚು ನಡೆಸುತ್ತಿವೆ. ವೀರೇಂದ್ರ ಪಾಟೀಲ್, ಬೊಮ್ಮಾಯಿ, ರಾಮಕೃಷ್ಣ ಹೆಗಡೆ, ಜೆ ಎಚ್ ಪಾಟೀಲ್ ಅವರಿಗೆ ಯಾರು ಎಷ್ಟು ಕಿರುಕುಳ ನೀಡಿದ್ದಾರೆ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಇಂಥಹದ್ದೇ ಕಿರುಕುಳವನ್ನು ತಮಗೂ ನೀಡುತ್ತಿದ್ದು, ಮಠಾಧೀಶರ ಆಶೀರ್ವಾದ, ಜನರ ಬೆಂಬಲ ಇರುವವರೆಗೂ ಇಂಥ ಪಿತೂರಿಗೆ ಜಗ್ಗುವುದಿಲ್ಲ ಎಂದು ಪರೋಕ್ಷವಾಗಿ ದೇವೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'> ಮೋಸ ಮಾಡುವವನ ಹೆಸರನ್ನು ಮಗನಿಗೆ ಇಡು ಎನ್ನುವ ನಾಣ್ನುಡಿಯನ್ನು ಸದಾ ಮನಸ್ಸಿನಲ್ಲಿ ಇಟ್ಟುಕೊಂಡಿದ್ದು ಟೀಕೆ,ಟಿಪ್ಪಣಿ ಮಾಡುವವರೇ ನನ್ನ ಹಿತೈಷಿಗಳು ಎಂದು ಭಾವಿಸಿ ಕೆಲಸ ಮಾಡುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.











Click it and Unblock the Notifications