ಶೀಘ್ರದಲ್ಲೇ ರೈಲು ಮಾರ್ಗಗಳ ಸಮೀಕ್ಷೆ ಆರಂಭ

ಹೊಸ ರೈಲು ಹಳಿ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರಕಾರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಐದು ಯೋಜನೆಗಳ ಯೋಜನಾ ವರದಿಯನ್ನೂ ಸಹ ಆರು ತಿಂಗಳಲ್ಲಿ ಪೂರ್ಣಗೊಳಿಸಿ, ಕಾಮಗಾರಿ ಆರಂಭಿಸಲು ಅಗತ್ಯವಿರುವ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ತ್ವರಿತವಾಗಿ ಸಮೀಕ್ಷೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ ಸಚಿವರು, ಚಾಮರಾಜನಗರ-ಕೃಷ್ಣಗಿರಿ, ಮೈಸೂರು-ಮಡಿಕೇರಿ, ಬೈಂದೂರು-ಕೊಲ್ಲೂರು, ಹಾಲಾಡಿ,ಹೆಬ್ರಿ, ಕಾರ್ಕಳ, ಮೂಡಬಿದ್ರೆ, ವೇಣೂರು, ಬೆಳ್ತಂಗಡಿ, ಧರ್ಮಸ್ಥಳ, ನಿಟ್ಟೆ ನಡುವಿನ ಹೊಸ ರೈಲು ಹಳಿಗಳ ಸಾಧ್ಯತೆಗೆ ಕೇಂದ್ರದ ಪರಿಸರ ಇಲಾಖೆ ಅನುಮತಿ ನೀಡಬೇಕು.
ಈ ಕುರಿತು ಸಚಿವ ಜೈರಾಮ್ ರಮೇಶ್ ಅವರೊಂದಿಗೆ ಚರ್ಚಿಸಿರುವುದಾಗಿ ಅವರು ಹೇಳಿದರು. 1163 ಕಿಮೀ ಉದ್ದದ 12 ಹೊಸ ರೈಲು ಹಳಿಗಳ ಸಮೀಕ್ಷೆಗಾಗಿ 348.90ಲಕ್ಷ ರುಪಾಯಿ ನೀಡಲಾಗಿದೆ ಎಂದರು.












Click it and Unblock the Notifications