ಬಸ್ ದರ ಏರಿಕೆ ಸಂಭವ: ಸಚಿವ ಅಶೋಕ್

ಇಂಧನ ದರ ಏರಿಕೆಯಿಂದ ರಾಜ್ಯ ಸಾರಿಗೆ ಇಲಾಖೆ ಮೇಲೆ ಸುಮಾರು 200 ಕೋಟಿ ಹೊರೆ ಬೀಳುತ್ತದೆ.ದರ ಏರಿಕೆ ಬಗ್ಗೆ ಸಂಪೂರ್ಣವಾಗಿ ಚರ್ಚೆ ನಡೆಸಿ, ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗುವುದು. ಸಿಎಂ ಒಪ್ಪಿಗೆ ನೀಡಿದ ನಂತರ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಅಶೋಕ್ ಹೇಳಿದರು.
ಕೇಂದ್ರ ಬಜೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕನಿಷ್ಟ ಎಂದರೂ 3 ರಿಂದ 4 ರುಪಾಯಿ ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಪ್ರಕಟಿಸಲಾಗಿತ್ತು. ಇದರಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾರ್ವಜನಿಕ ಸಾರಿಗೆ ದರ ಏರಿಕೆ ಮಾಡುವ ಪ್ರಸ್ತಾಪವನ್ನು ಸಿಎಂ ಯಡಿಯೂರಪ್ಪ ಅವರ ಮುಂದಿಡಲಿದೆ. ಈಗ ಜನಸಾಮಾನ್ಯರ ಗಮನ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿರುವ ಸಿಎಂ ಅವರ ನಿರ್ಧಾರದ ಮೇಲಿದೆ.












Click it and Unblock the Notifications