ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2010ರ ಕೇಂದ್ರ ಬಜೆಟ್ ನ ಮುಖ್ಯಾಂಶಗಳು

By Mrutyunjaya Kalmat
|
Google Oneindia Kannada News

Pranab Mukherjee
ನವದೆಹಲಿ, ಫೆ. 26 : ಎರಡನೇ ಬಾರಿಗೆ ಕೇಂದ್ರದ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕೇಂದ್ರ ಬಜೆಟ್ 2010 ಮಂಡನೆ ಆರಂಭವಾಗಿದೆ. ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಬಜೆಟ್ ಮಂಡಿಸುತ್ತಿದ್ದು, ಆರ್ಥಿಕ ವೃದ್ಧಿ ದರ (ಜಿಡಿಪಿ) ಏರಿಕೆ ಮಾಡುವುದು ಸರಕಾರ ಏಕೈಕ ಗುರಿ ಎಂದು ಹೇಳಿದ್ದಾರೆ.

ರೈಲ್ವೇ ಬಜೆಟ್: ರಾಜ್ಯದ ಮೇಲೆ ಮಮತಾ ಕೃಪಾಕಟಾಕ್ಷ

ವಿಡಿಯೋ: ಕೇಂದ್ರ ಬಜೆಟ್ 2010-11ನಿರೀಕ್ಷೆಗಳು

ಬಜೆಟ್ ಮುಖ್ಯಾಂಶಗಳು:
*ಪೆಟ್ರೋಲ್, ಡಿಸೇಲ್ ಬೆಲೆಗಳು ಹೆಚ್ಚಳ.
*ಆದಾಯ ತೆರಿಗೆ ರಿಟರ್ಸ್ ಸಲ್ಲಿಸಲು ಸರಳ್ 2 ಅರ್ಜಿ ನಮೂನೆ.
*ಆದಾಯ ತೆರಿಗೆ ವಿನಾಯಿತಿ ಮಿತಿ ಬದಲಿಲ್ಲ.
*1.6 ಲಕ್ಷ ರುಪಾಯಿವರೆಗೆ ತೆರಿಗೆ ಇಲ್ಲ. ತೆರಿಗೆ ಸ್ಲಾಬ್ ವಿಸ್ತರಣೆ.
*1.6 ಲಕ್ಷ ದಿಂದ 5 ಲಕ್ಷ ರುಪಾಯಿವರೆಗೆ ಶೇ. 10 ತೆರಿಗೆ.
*5 ಲಕ್ಷ ದಿಂದ 8 ಲಕ್ಷ ರುಪಾಯಿವರೆಗೆ ಶೇ. 20 ತೆರಿಗೆ.
*8 ಲಕ್ಷಕ್ಕಿಂತ ಅಧಿಕ ಆದಾಯಕ್ಕೆ ಶೇ. 30 ತೆರಿಗೆ.
*7.46 ಲಕ್ಷ ಕೋಟಿ ತೆರಿಗೆ ಸಂಗ್ರಹ ಗುರಿ.
*2010-1 ರಲ್ಲಿ ವಿತ್ತೀಯ ಕೊರತೆ 5.5 ನಿರೀಕ್ಷೆ.
*ನಕ್ಸಲ್ ಪೀಡಿತಜಿಲ್ಲೆಗಳ ಅಭಿವೃದ್ದಿಗೆ ಕ್ರಮ.
*ಈ ವರ್ಷಾಂತ್ಯಕ್ಕೆ ಗುರುತಿನ ಚೀಟಿ ವಿತರಣೆ ಆರಂಭ
*ಕಂಪನಿಗಳ ಮೇಲೆ ವಿಧಿಸುವ ಸರ್ಚಾರ್ಜ್ ಶೇ. 10 ರಿಂದ ಶೇ. 7ಕ್ಕೆ ಇಳಿಕೆ.
*ಕಂಪನಿಗಳ ಮೇಲೆ ವಿಧಿಸುವ ತೆರಿಗೆ ಶೇ. 15 ರಿಂದ 18ಕ್ಕೆ ಏರಿಕೆ.
*ರಕ್ಷಣಾ ಇಲಾಖೆಗೆ 1,47,000ಕೋಟಿ ರುಪಾಯಿ.
*ಮಹಿಳಾ ಕೃಷಿನಿಧಿ ಯೋಜನೆ 100 ಕೋಟಿ ರುಪಾಯಿ.
*ರಾಷ್ಟ್ರೀಯ ನ್ಯಾಯದಾನ ಮಿಷನ್ ಸ್ಥಾಪನೆ.
*ಅಬಕಾರಿ ಸುಂಕ ಶೇ. 8ರಿಂದ 10 ಕ್ಕೆ ಏರಿಕೆ.
*ಸಿಗರೇಟು ಮತ್ತಷ್ಟುತುಟ್ಟಿ.
*ತೈಲಕ್ಕೆ ಅಬಕಾರಿ ಸುಂಕ ಶೇ.1 ಹೆಚ್ಚಳ.
*ದೊಡ್ಡ ಕಾರು, ಸಿಮೆಂಟ್ ಮತ್ತಷ್ಟು ದುಬಾರಿ.
*2000 ಜನಸಂಖ್ಯೆ ಇರುವ ಎಲ್ಲ ಹಳ್ಳಿಗಳಿಗೂ ಬ್ಯಾಂಕ್ ಸ್ಥಾಪನೆ.
*ಅಸಂಘಟಿತ ವಲಯ ಜನರ ಸುರಕ್ಷಿತೆಗೆ ಸಂಧ್ಯಾಸುರಕ್ಷಾ ಯೋಜನೆಗೆ 1000 ಕೋಟಿ ರುಪಾಯಿ.
*ಆರೋಗ್ಯ ಇಲಾಖೆಗೆ 22, 300 ಕೋಟಿ ರುಪಾಯಿ.
*10 ಲಕ್ಷ ರುಪಾಯಿ ಗೃಹ ಸಾಲಕ್ಕೆ ಶೇ. 1 ಬಡ್ಡಿ ಸಬ್ಸಿಡಿ.
*ನೂತನ ಪಿಂಚಣಿ ಸೇರುವ ಪ್ರತಿ ಕಾರ್ಮಿಕನಿಗೆ ಖಾತೆ 1000 ಸೇರ್ಪಡೆ.
*ಇಂದಿರಾ ಆವಾಸ್ ಯೋಜನೆಗೆ 1000 ಕೋಟಿ ರುಪಾಯಿ.
*ಅಸಂಘಟಿತ ಕಾರ್ಮಿಕ ಪಿಂಚಣಿ ಮೂರು ವರ್ಷಕ್ಕೆ ವಿಸ್ತರಣೆ.
*ರಾಜೀವ ಆವಾಸ್ ಯೋಜನೆಗೆ 1,270 ಕೋಟಿ ರುಪಾಯಿ.
*ಜವಳಿ ವಲಯದಲ್ಲಿ 30 ಜನರಿಗೆ ಕೌಶಾಲಾಭಿವೃದ್ದಿ ತರಬೇತಿ.
*ರಾಷ್ಟ್ರೀಯ ಗುರುತಿನ ಚೀಟಿ ಯೋಜನೆಗೆ1900 ಕೋಟಿ ರುಪಾಯಿ.
*2010ರಲ್ಲಿ 2000 ಸಿಆರ್ ಪಿಎಫ್ ಯೋಧರ ನೇಮಕ.
*ಹೆಚ್ಚುತ್ತಿರುವ ಆಹಾರ ಧಾನ್ಯ ವಸ್ತುಗಳ ದರ ಏರಿಕೆಗೆ ಕಡಿವಾಣ.
*2 ತಿಂಗಳೊಳಗೆ ಆಹಾರ ವಸ್ತುಗಳ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಎಲ್ಲ ಮುಖ್ಯಮಂತ್ರಿಗಳೊಂದಿಗೆ ಸಭೆ.
*ಹೊಸ ಗೊಬ್ಬರ ನೀತಿ ಏಪ್ರಿಲ್ ನಿಂದ ಜಾರಿ.
*ರೈತರಿಗೆ ನೇರ ರಸಗೊಬ್ಬರ ಸಬ್ಸಿಡಿ ನೀತಿ.
*25 ಸಾವಿರ ಕೋಟಿ ಬಂಡವಾಳ ಹಿಂಪಡೆಯಲು ಕ್ರಮ.
*2011 ರ ಏಪ್ರಿಲ್ ನಿಂದ ನೇರ ತೆರಿಗೆ ಪಾವತಿ ನೀತಿ.
*ಈ ವರ್ಷದ ಏಪ್ರಿಲ್ ವೇಳೆಗೆ 20.9 ಶತಕೋಟಿ ಡಾಲರ್ ವಿದೇಶ ಬಂಡವಾಳ ಹರಿವು.
*ಪಡಿತರ ವ್ಯವಸ್ಥೆಗೆ ಸುಧಾರಣೆ.
*ತೆರಿಗೆ ಕಾನೂನುಗಳ ಸರಳೀಕರಕ್ಕೆ ಕ್ರಮ.
*ಖಾಸಗಿಕಂಪನಿಗಳಿಗೆ ಬ್ಯಾಂಕಿಂಗ್ ಲೈಸೆನ್ಸ್.
*ಆರ್ಥಿಕ ಕುಸಿತ ತಡೆಗೆ ರಾಷ್ಟ್ರೀಯ ಸಮಿತಿ ರಚನೆ.
*ವಿದೇಶಿ ಬಂಡವಾಳ ನೀತಿ ಸರಳೀಕರಣ.
*ಕನಿಷ್ಟ ತೆರಿಗೆ ಮಿತಿ ಏರಿಕೆಗೆ ಕ್ರಮ.
*ಪಾರೀಖ್ ಸಮಿತಿ ಶಿಫಾರಸ್ ಜಾರಿಗೆ ಪರಿಶೀಲನೆ.
*ರಫ್ತು ಉತ್ತೇಜಿಸಲು ವಿಶೇಷ ಆರ್ಥಿಕ ವಲಯಕ್ಕೆ ಮತ್ತಷ್ಟು ನೆರವು.
*ಪೆಟ್ರೋಲ್ ಬೆಲೆ ಏರಿಳಿತಕ್ಕೆ ಕ್ರಮ.
*ಪಡಿತರ ದಾಸ್ತಾನು ಸಂಗ್ರಹಕ್ಕೆ ಖಾಸಗಿ ಕಂಪನಿಗಳ ಸಹಭಾಗಿತ್ವ.
*ಈ ವರ್ಷ ರೈತರಿಗೆ 3.75 ಲಕ್ಷ ಕೋಟಿ ರುಪಾಯಿ ಸಾಲ ವಿತರಣೆ ಗುರಿ.
*ಕೃಷಿ ಸಾಲ ಮರುಪಾವತಿಗೆ ಅವಧಿ 6 ತಿಂಗಳ ವಿಸ್ತರಣೆ.
*ನೀರು ಪೂರೈಕೆ 300 ಕೋಟಿ ರುಪಾಯಿ.
*ರಾಷ್ಟ್ರೀಯ ವಿಕಾಸ ಯೋಜನೆಗೆ 300 ಕೋಟಿ ರುಪಾಯಿ.
*ಮೂಲಸೌಕರ್ಯ ಅಭಿವೃದ್ಧಿಗೆ 1.75 ಲಕ್ಷ ಕೋಟಿ ರುಪಾಯಿ ಮೀಸಲು.
*60ಸಾವಿರ ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ.
*ರೈತರ ಸಬ್ಸಿಡಿ ನೆರವು ಶೇ. 1 ರಿಂದ 2ಕ್ಕೆ ಏರಿಕೆ.
*ದೇಶಾದ್ಯಂತ 5 ಮೆಗಾ ಫುಡ್ ಪಾರ್ಕ್ ಗಳ ಸ್ಥಾಪನೆ.
*ರಸ್ತೆಗಳ ಅಭಿವೃದ್ಧಿಗೆ 19, 894ಕೋಟಿ ರುಪಾಯಿಗಳು.
*ವಿದ್ಯುತ್ ವಲಯಕ್ಕೆ 5130 ಕೋಟಿ ಮೀಸಲು.
*ಭಾರತೀಯ ರೈಲ್ವೆಗೆ 1650 ಕೋಟಿ ನೆರವು.
*ಪ್ರತಿ ದಿನ 20ಕಿಮೀ ರಾಷ್ಟ್ರೀಯಹೆದ್ದಾರಿ ನಿರ್ಮಾಣದ ಗುರಿ.
*ಶುದ್ಧ ಇಂಧನ ಉತ್ಪಾದನೆಗೆ ಫಂಡ್ ಸ್ಥಾಪನೆ.
*2020 ರ ವೇಳೆಗೆ 20 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಗುರಿ.
*ನಿರ್ಮಲಾ ಗಂಗಾ ಯೋಜನೆಗೆ 500 ಕೋಟಿ ರುಪಾಯಿ.
*ತಿರುಪೂರು ಜವಳಿ ವಲಯಕ್ಕೆ 1300 ಕೋಟಿ ರುಪಾಯಿ.
*ಉದ್ಯೋಗ ಖಾತ್ರಿ ಯೋಜನೆಗೆ 40 ಸಾವಿರ ಕೋಟಿ ರುಪಾಯಿ.
ಶಿ*ಕ್ಷಣಕ್ಕೆ 31,036 ಕೋಟಿ ರುಪಾಯಿ.
*ಗ್ರಾಮೀಣಾಭಿವೃದ್ದಿಗೆ 66,100 ಕೋಟಿ ರುಪಾಯಿ.
*ಸ್ವರ್ಣ ಜಯಂತಿ ರೋಜಗಾರ್ ಯೋಜನೆಗೆ 5300 ಕೋಟಿ ರುಪಾಯಿ.
*ಭಾರತ ನಿರ್ಮಾಣ ಯೋಜನೆಗೆ 48ಸಾವಿರ ಕೋಟಿ ರುಪಾಯಿ.
*ಗೋವಾ ಅರಣ್ಯ ಮತ್ತು ಬೀಚ್ ಗಳ ರಕ್ಷಣೆಗೆ 200ಕೋಟಿ ರುಪಾಯಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X