ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ನಿಮ್ಮ ಮಕ್ಕಳಿಗೊಂದು ಶಾಲೆ": ಶೈಕ್ಷಣಿಕ ಮಾಹಿತಿ ಮೇಳ

By *ಸಿ ಎಸ್ ರಾಮಚಂದ್ರ ಹೆಗಡೆ
|
Google Oneindia Kannada News

Edu Catalyst and Srushti Ventures Education Mela
ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಮಾಹಿತಿಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಕ್ರಿಯಾಶೀಲ ಯುವಸಮೂಹ "ಎಜು ಕ್ಯಾಟಲಿಸ್ಟ್ಸ್" ಸಂಸ್ಥೆ ಹಾಗೂ ಮಕ್ಕಳಿಗಾಗಿ ಹಲವು ಕ್ರಿಯಾಶೀಲ ಶಿಬಿರ ಮತ್ತು ಸಾಹಿತ್ಯ,ಸಂಸ್ಕೃತಿ,ಸಾಮಾಜಿಕ ಕಾಳಜಿಯ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಬಸವನಗುಡಿಯ "ಸೃಷ್ಟಿ ವೆಂಚರ್ಸ್" ಸಂಸ್ಥೆ ಜಂಟಿಯಾಗಿ ಬರುವ ಫೆಬ್ರವರಿ 27, 28 ರಂದು "ನಿಮ್ಮ ಮಕ್ಕಳಿಗೊಂದು ಶಾಲೆ" ಎಂಬ ವಿನೂತನ ಶೈಕ್ಷಣಿಕ ಮಾಹಿತಿ ಮೇಳವನ್ನು ಆಯೋಜಿಸಿದೆ.

"ಶಿಕ್ಷಣ"-ಮಾನವ ವಿಕಾಸದ ಹಾದಿಯಲ್ಲೊಂದು ಉತ್ತಮ ಮಾರ್ಗದರ್ಶಿ. ಮುಗ್ಧತೆಯೇ ಮೈತಳೆದಂತಿರುವ ಪುಟ್ಟ ಮಕ್ಕಳಲ್ಲಿ ಆಸಕ್ತಿ ಹಾಗೂ ಅರಿವನ್ನು ತುಂಬಿ,ಅವರೊಳಗಿನ ಪ್ರತಿಭೆ ಹಾಗೂ ಸಹಜ ಕುತೂಹಲವನ್ನು ಉತ್ತೇಜಿಸಿ,ವಿಕಾಸಗೊಳಿಸಿ ಅವರನ್ನು ಸತ್ಪ್ರಜೆಗಳನ್ನಾಗಿಸುವಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದು. ಆ ಕಾರಣಕ್ಕಾಗಿಯೇ ತಮ್ಮ ಮಗುವನ್ನು ಮೊದಲ ಬಾರಿ ಶಾಲೆಗೆ ಸೇರಿಸುವಾಗ ಪೋಷಕರಲ್ಲಿನ ಆತಂಕ, ನಿರೀಕ್ಷೆ ಸಹಜವಾದದ್ದೇ.

ನೀವು ನಿಮ್ಮ ಮಗುವನ್ನು ಶಾಲೆಗೆ ಸೇರಿಸಲು ಉತ್ತಮ ಶಾಲೆಯೊಂದರ ಹುಡುಕಾಟದಲ್ಲಿದ್ದೀರಾ? ನಿಮ್ಮ ಮಗುವಿಗೊಂದು ಉಜ್ವಲ ಭವಿಷ್ಯ ಕಟ್ಟಿಕೊಡಲು ಉತ್ತಮ ಶಿಕ್ಷಣ ಕೊಡಿಸುವ ಕನಸು ಹೊಂದಿದ್ದೀರಾ? ನಿಮ್ಮ ಕನಸಿಗೆ ಹಾಗೂ ನಿಮ್ಮ ಮಗುವಿನ ಪ್ರತಿಭೆ ಹಾಗೂ ಆಸಕ್ತಿಗಳಿಗೆ ಸರಿಹೊಂದುವ ಶಾಲೆಯೊಂದರ ನಿರೀಕ್ಷೆಯಲ್ಲಿದ್ದೀರಾ? ಅಂತಹ ಶಾಲೆ ನಿಮ್ಮ ಬಡಾವಣೆಯ ಸುತ್ತಮುತ್ತ ಎಲ್ಲಿದೆ ಎಂಬ ಮಾಹಿತಿ ನಿಮಗೆ ಬೇಕಾಗಿದೆಯಾ? ನಿಮ್ಮ ಸನಿಹದ ಶಾಲೆಗಳ ಕುರಿತು ಸರಿಯಾದ ಮಾಹಿತಿ ನಿಮಗೆ ಲಭ್ಯವಾಗುತ್ತಿಲ್ಲವೆ? ನಿಮ್ಮ ಕನಸು, ಯೋಜನೆಗಳಿಗೆ ಸರಿಹೊಂದುವ ಅತ್ಯುತ್ತಮ ಅವಕಾಶಗಳನ್ನು ನಿಮ್ಮ ಮಗುವಿಗೆ ನೀಡಲು ನೀವು ಕಾಯುತ್ತಿದ್ದೀರಾ?

ನಿಮ್ಮ ಕನಸು,ಕುತೂಹಲ, ಆಸಕ್ತಿ, ಆತಂಕ,ನಿರೀಕ್ಷೆ, ಹುಡುಕಾಟ ಎಲ್ಲಕ್ಕೂ ಇಲ್ಲಿದೆ ಉತ್ತರ. "ಎಜು ಕ್ಯಾಟಲಿಸ್ಟ್ಸ್" ಸಂಸ್ಥೆ, "ಸೃಷ್ಟಿ ವೆಂಚರ್ಸ್" ನ ಸಹಯೋಗದಲ್ಲಿ ಆಯೋಜಿಸುತ್ತಿರುವ "ನಿಮ್ಮ ಮಕ್ಕಳಿಗೊಂದು ಶಾಲೆ-2010" ಶೈಕ್ಷಣಿಕ ಮಾಹಿತಿ ಮೇಳ ನಿಮ್ಮ ಮಗುವಿನ ಉಜ್ವಲ ಭವಿಷ್ಯದ ಕನಸಿಗೊಂದು ವೇದಿಕೆಯಾಗಲಿದೆ. ನಿಮ್ಮ ಹಲವು ದಿನಗಳ ಹುಡುಕಾಟ, ನಿರೀಕ್ಷೆಗಳಿಗೆ ಈ ಮಾಹಿತಿ ಮೇಳ ಅಂತಿಮ ಉತ್ತರ ನೀಡಲಿದೆ. ನಿಮ್ಮ ಮಗುವಿನ ಭವಿಷ್ಯದ ಕನಸುಗಳ ಸಾಕಾರಕ್ಕೆ ನಾಂದಿಯಾಗಲಿದೆ.

ಈ ಶೈಕ್ಷಣಿಕ ಮಾಹಿತಿ ಮೇಳದಲ್ಲಿ ಬೆಂಗಳೂರಿನ ಹಲವು ಪ್ರತಿಷ್ಟಿತ ವಿದ್ಯಾಸಂಸ್ಥೆಗಳು ಭಾಗವಹಿಸುತ್ತಿವೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಅತ್ಯುತ್ತಮ ಪ್ರೀ-ಸ್ಕೂಲ್ ಗಳು, ಇಂಟರ್ ನ್ಯಾಷನಲ್ ಹಾಗೂ ರೆಸಿಡೆನ್ಶಿಯಲ್ ಶಾಲೆಗಳು, ಅತ್ಯಾಧುನಿಕ ಐ.ಸಿ.ಎಸ್.ಈ ಹಾಗೂ ಸಿ.ಬಿ.ಎಸ್.ಈ ಶಾಲೆಗಳು ಅಷ್ಟೇ ಅಲ್ಲದೆ ಪ್ರತಿಷ್ಟಿತ ಪುಸ್ತಕ ಮಳಿಗೆಗಳು, ಮಕ್ಕಳಿಗೆ ಕ್ರಿಯೇಟಿವ್ ತರಗತಿಗಳನ್ನು ನಡೆಸುವ ಸಂಸ್ಥೆಗಳು ಈ ಶೈಕ್ಷಣಿಕ ಮಾಹಿತಿ ಮೇಳದಲ್ಲಿ ಪಾಲ್ಗೊಳ್ಳುತ್ತಿವೆ. ಪೋಷಕರು ನೇರವಾಗಿ ಈ ಸಂಸ್ಥೆಗಳೊಂದಿಗೆ ಮಾತನಾಡಬಹುದು, ಮಾಹಿತಿ ಪಡೆಯಬಹುದು, ಸಂವಾದ ನಡೆಸಬಹುದು.

ಶಾಲೆಗಳ ಕುರಿತ ವಿಡಿಯೋ ಪ್ರೆಸೆಂಟೇಶನ್ ಕೂಡಾ ಲಭ್ಯ. ಮಕ್ಕಳು ಹಾಗೂ ಪೋಷಕರು ತಮ್ಮ ಕನಸನ್ನು ಹಂಚಿಕೊಳ್ಳುವ ಮತ್ತು ತಮ್ಮ ಕನಸಿಗೆ ಸರಿಹೊಂದುವ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಹಾಗೂ ವೇದಿಕೆ ಇಲ್ಲಿರುತ್ತದೆ. ಈ ಶೈಕ್ಷಣಿಕ ಮಾಹಿತಿ ಮೇಳಕ್ಕೆ ಮಕ್ಕಳು, ಪೋಷಕರು ಹಾಗೂ ಎಲ್ಲ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಅಷ್ಟೇ ಅಲ್ಲದೆ ಮಾಹಿತಿ ಮೇಳಕ್ಕೆ ಬರುವ ಮಕ್ಕಳಿಗೆ ಭಾಗವಹಿಸುತ್ತಿರುವ ಶಾಲೆಗಳು ಲಕ್ಕಿ ಡ್ರಾ ಮೂಲಕ ಉಚಿತ ವಿದ್ಯಾರ್ಥಿವೇತನ ಸೌಲಭ್ಯವನ್ನು ನೀಡುತ್ತವೆ.

ಜತೆಗೆ ಮಕ್ಕಳಿಗಾಗಿಯೇ ರೂಪಿಸಲಾದ ವಿಶೇಷ ಬಗೆಯ ಆಟಗಳು,ಮನರಂಜನಾತ್ಮಕ ಕಾರ್ಯಕ್ರಮಗಳು, ಮಕ್ಕಳಿಗಾಗಿ ವಿಶೇಷ ಬಹುಮಾನಗಳು ಇಲ್ಲಿ ಲಭ್ಯವಿದೆ. ಮಾಹಿತಿ ಮೇಳದಲ್ಲಿ ಭಾಗವಹಿಸುವ ಪೋಷಕರಿಗೆ ಲಕ್ಕಿ ಡ್ರಾ ಮೂಲಕ ವಿಶೇಷ ಗಿಫ್ಟ್ ವೋಚರ್ ಗಳನ್ನು ನೀಡಲಾಗುತ್ತದೆ. ಪೋಷಕರು ಶಾಲೆಗಳ ಮುಖ್ಯಸ್ಥರೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶ ಈ ಮಾಹಿತಿ ಮೇಳದ ವಿಶೇಷ.

"ಎಡು-ಕ್ಯಾಟಲಿಸ್ಟ್ಸ್" ಸಂಸ್ಥೆ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹಾಗೂ ದೃಷ್ಟಿಕೋನವನ್ನು ಹೊಂದಿರುವ, ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಣಿತಿಯನ್ನು ಪಡೆದಿರುವ ಯುವಸಮೂಹವನ್ನು ಹೊಂದಿದ್ದು ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಬಗೆಯ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇನ್ನು ಬಸವನಗುಡಿಯಲ್ಲಿರುವ "ಸೃಷ್ಟಿ ವೆಂಚರ್ಸ್" ಸಂಸ್ಥೆ ತನ್ನ ಕ್ರಿಯಾಶೀಲ ಹಾಗೂ ವಿನೂತನ ಮಾದರಿಯ ಕಾರ್ಯಕ್ರಮಗಳಿಂದಲೇ ಜನಮನ್ನಣೆ ಪಡೆದಿದೆ. ಕಳೆದ ಹಲವಾರು ವರ್ಷಗಳಿಂದ ಮಕ್ಕಳ ಕ್ರಿಯಾಶೀಲತೆಯನ್ನು ಉತ್ತೇಜಿಸುವ , ವಿಕಾಸಗೋಳಿಸುವ ಹಲವು ಕ್ರಿಯೇಟಿವ್ ಶಿಬಿರಗಳು, ಕಲಾತ್ಮಕ ತರಬೇತಿಯ ಕಾರ್ಯಕ್ರಮಗಳು ಹಾಗೂ ಸಾಹಿತ್ಯ , ಸಾಮಾಜಿಕ ಕಾಳಜಿಯ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿ ಜನ ಮೆಚ್ಚುಗೆ ಗಳಿಸಿದೆ. ಈ ಎರಡೂ ಕ್ರಿಯಾಶೀಲ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ "ನಿಮ್ಮ ಮಕ್ಕಳಿಗೊಂದು ಶಾಲೆ-2010" ಶೈಕ್ಷಣಿಕ ಮಾಹಿತಿ ಮೇಳ ತಮ್ಮ ಮಕ್ಕಳ ಭವಿಷ್ಯದ ಕುರಿತು ನೂರಾರು ಕನಸು ಹೊಂದಿರುವ ಪೋಷಕರಿಗೆ ನೆರವಾಗುವ ಪ್ರಾಮಾಣಿಕ ಉದ್ದೇಶ ಹೊಂದಿದೆ.

"ನಿಮ್ಮ ಮಕ್ಕಳಿಗೊಂದು ಶಾಲೆ-2010" ಶೈಕ್ಷಣಿಕ ಮಾಹಿತಿ ಮೇಳದ ದಿನಾಂಕ :
ಫೆಬ್ರವರಿ 27, 28, ಶನಿವಾರ ಮತ್ತು ಭಾನುವಾರ
ಸಮಯ : ಬೆಳಿಗ್ಗೆ 10.30 ರಿಂದ ರಾತ್ರಿ 8.30 ರವರೆಗೆ

ಸ್ಥಳ: "ರಾಜಲಕ್ಷ್ಮಿ ಕಲ್ಯಾಣ ಮಂದಿರ" , ನಂ.726, 46 ನೇ ಅಡ್ಡರಸ್ತೆ, 8ನೇ ಬ್ಲಾಕ್, ಜಯನಗರ, ಬೆಂಗಳೂರು-82

ಹೆಚ್ಚಿನ ಮಾಹಿತಿಗೆ : 9886380404/ 9844038972/ 9844038672
ಈ ಮೇಲ್: [email protected],
ವೆಬ್: www.educatalyst.in

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X