ವಿಪ್ರೋದಲ್ಲಿದ್ದ 'ವಿನಿವಿಂಕ್ ಶಾಸ್ತ್ರಿ' ಆತ್ಮಹತ್ಯೆ
ಬೆಂಗಳೂರು,
ಫೆ. 23 ; ವಿಪ್ರೋದಲ್ಲಿ ನಾಲ್ಕು ಕೋಟಿ ಡಾಲರ್ ಮೊತ್ತದ ಭಾರಿ ಅವ್ಯವಹಾರಕ್ಕೆ ಕಾರಣನಾದ ಟೆಕ್ಕಿ ಅನೂಪ್ ಅಗರವಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟೆಕ್ಕಿ ಈ ಅವ್ಯವಹಾರದ ರೂವಾರಿ ಎಂದು ಮೂಲಗಳು ತಿಳಿಸಿವೆ. id="toptextpromo">ಕಳೆದ
ಡಿ. 23ರಂದು ಅನೂಪ್ ಕೆ ಆರ್ ರೈಲ್ವೆ ನಿಲ್ದಾಣದ ಬಳಿ ರೈಲಿಗೆ ತೆಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ವಿಪ್ರೋ ಕಂಪನಿ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ವಿಪ್ರೋ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅನೂಪ್ ಅಗರವಾಲ್ (28) ಬ್ಯಾಂಕ್ ಅಕೌಂಟ್ ಪಾಸ್ ವರ್ಡ್ ಹ್ಯಾಕ್ ಮಾಡಿ ಸುಮಾರು 4 ಕೋಟಿ ಡಾಲರ್ ರುಪಾಯಿಗಳನ್ನು ತನ್ನ ಹಾಗೂ ಸಂಬಂಧಿಗಳ ಅಕೌಂಟ್ ಗೆ ವರ್ಗಾಯಿಸಿಕೊಂಡಿದ್ದ. id='are-slot-1' class='oiad oi-axt oiadv'> id='top-searched-articles'>ಇದು
ಡಿಸೆಂಬರ್ ತಿಂಗಳಲ್ಲೇ ಬೆಳಕಿಗೆ ಬಂದಿತ್ತು. ಈ ಸಂಬಂಧ ಆಂತರಿಕ ತನಿಖೆಗೆ ವಿಪ್ರೋ ಆದೇಶಿಸಿತ್ತು. ಅನುಮಾನದ ಮೇಲೆ ಅನೂಪ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಈ ಆಧಾರದ ಮೇಲೆ ಅನೂಪ್ ಸೇರಿ 6 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆತ ಅತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.











Click it and Unblock the Notifications