ತಾಲಿಬಾನಿಗಳಿಂದ ಸಿಖ್ ರ ಶಿರಚ್ಛೇದ
ಪೇಷಾವರ,
ಫೆ. 22 : ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ನಿರಾಕರಿಸಿದ ಇಬ್ಬರು ಸಿಖ್ ವ್ಯಕ್ತಿಗಳನ್ನು ತಾಲಿಬಾನ್ ಉಗ್ರರು ಭೀಕರವಾಗಿ ಹತ್ಯೆಗೈದು, ಅವರು ರುಂಡ ಬೇರ್ಪಡಿಸಿದ ಅತ್ಯಂತ ಖಂಡನೀಯ ಕೃತ್ಯ ಪಾಕಿಸ್ತಾನದ ಹಿಂದುಳಿದ ಪ್ರದೇಶ ವಾಜರೀಸ್ತಾನದಲ್ಲಿ ನಡೆದಿದೆ. ಕಳೆದ ತಿಂಗಳು ಈ ಇಬ್ಬರು ಸಿಖ್ ರನ್ನು ಉಗ್ರರು ಅಪಹರಣ ಮಾಡಿದ್ದರು. id="toptextpromo">ಪೇಷಾವರದ
ಗುರುದ್ವಾರದ ಬಳಿ ಈ ಇಬ್ಬರು ಸಿಖ್ ರ ದೇಹ ಮತ್ತು ರುಂಡವನ್ನು ಎಸದು ಹೋಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಜಸ್ಪಾಲ್ ಸಿಂಗ್ ಮತ್ತು ಮೋಹನ್ ಸಿಂಗ್ ಭೀಕರವಾಗಿ ಹತ್ಯೆಗೀಡಾದ ನತದೃಷ್ಟರು. ಪಾಕಿಸ್ತಾನದ ಮೂಲದ ಸಿಖ್ ರ ಮೇಲೆ ಈ ತಾಲಿಬಾನಿಗಳು ದೌರ್ಜನ್ಯ ನಡೆಸುತ್ತಿದ್ದು, ನಿತ್ಯ ಕಿರುಕುಳ ನೀಡುತ್ತಿರುವುದು ಗೊತ್ತಿರುವ ಸಂಗತಿ. ಇತ್ತೀಚಿನ ದಿನಗಳಲ್ಲಿ ತಾಲಿಬಾನಿ ಉಗ್ರರು ಸಿಖ್ ರನ್ನು ಅಪಹರಿಸಿ ಇಸ್ಲಾಂಗೆ ಮತಾಂತರ ಹೊಂದುವಂತೆ ಒತ್ತಾಯಿಸುವುದು, ಅದಕ್ಕೆ ಇವರು ಒಪ್ಪದಿದ್ದಲ್ಲಿ ಹತ್ಯೆ ಮಾಡುವುದು ನಡೆದುಕೊಂಡು ಬಂದಿದೆ. id='are-slot-1' class='oiad oi-axt oiadv'> id='top-searched-articles'>ಇಸ್ಲಾಂ
ಧರ್ಮಕ್ಕೆ ಮತಾಂತರಗೊಳ್ಳದ ಸಿಖ್ ರನ್ನು ಭೀಕರವಾಗಿ ಕೊಂದು ಹಾಕಿದ ಉಗ್ರರ ವರ್ತನೆಯನ್ನು ಭಾರತ ಸರಕಾರ ಹಾಗೂ ಬಿಜೆಪಿ ಖಂಡಿಸಿದೆ. ಈ ಕುರಿತು ಪಾಕ್ ಸರಕಾರದಿಂದ ಸ್ಪಷ್ಟನೆ ಪಡೆದುಕೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.











Click it and Unblock the Notifications