ನಾಯಕತ್ವ ಬೆಳಸುವ ಕಂಪನಿಗಳಲ್ಲಿ ಪಟ್ಟಿಯಲ್ಲಿ ಇನ್ಫಿ

ಮಾನವ ಸಂಪನ್ಮೂಲ ಸಲಹಾ ಸಂಸ್ಥೆ ಹೇಯ್ ಗ್ರೂಪ್ ಈ ಪಟ್ಟಿಯನ್ನು ಸಿದ್ಧಪಡಿಸಿದ್ದು, ಆರ್ಥಿಕ ಹಿಂಜರಿತದ ಕಷ್ಟಕರ ದಿನಗಳಲ್ಲೂ ಇನ್ಫೋಸಿಸ್ ತನ್ನ ಸಿಬ್ಬಂದಿಯ ಏಳಿಗೆ ಗಮನ ಕೇಂದ್ರಿಕರಿಸಿತ್ತು ಎಂದು ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಬ್ಲೂಮ್ ಬರ್ಗ್ ಬಿಸಿನೆಸ್ ವೀಕ್ ವೆಬ್ ಸೈಟ್ ಜೊತೆಗೂಡಿ ಹೇಯ್ ಗ್ರೂಫ್ ಸಂಸ್ಥೆ ಈ ಪಟ್ಟಿ ತಯಾರಿಸಿದೆ. ಇಪ್ಪತ್ತು ಉದ್ದಿಮೆಗಳ ಪಟ್ಟಿಯಲ್ಲಿ ಜನರಲ್ ಎಲೆಕ್ಟ್ರಿಕ್ ಕಂಪನಿಗೆ ಮೊದಲ ಸ್ಥಾನ ದೊರೆತಿದೆ. ಈ ಕಂಪನಿಯೂ ಸಿಬ್ಬಂದಿಯಲ್ಲಿ ನಾಯಕತ್ವ ಬೆಳೆಯಲು ಸುಮಾರು 400 ದಶಲಕ್ಷ ಡಾಲರ್ ನಷ್ಟು ಹಣ ವ್ಯಯಿಸುತ್ತದೆ ಎಂದು ಸಮೀಕ್ಷೆ ಹೇಳಿದೆ.












Click it and Unblock the Notifications