ಬಿಬಿಎಂಪಿ ಚುನಾವಣೆ : ತಡಯಾಜ್ಞೆಗೆ ಸುಪ್ರೀಂ ನಕಾರ
ನವದೆಹಲಿ,
ಫೆ. 19 : ಬಿಬಿಎಂಪಿ ಚುನಾವಣೆಗೆ ತಡೆ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ. ಹೈಕೋರ್ಟ್ ಆದೇಶದಂತೆ ಚುನಾವಣೆ ನಡೆಸುವುದಾಗಿ ಸರಕಾರದ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ ಚುನಾವಣೆಗೆ ತಡೆಯಾಜ್ಞೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ. id="toptextpromo">ಚುನಾವಣೆಗೆ
ತಡೆಯಾಜ್ಞೆ ಬೇಡ, ಹೋಗಲಿ ಸ್ವಲ್ಪ ಸಮಯವನ್ನಾದರೂ ನೀಡಿ ಎಂದು ಸರಕಾರ ಮಾಡಿಕೊಂಡ ಮನವಿಯನ್ನು ಆಲಿಸಿದ ಸುಪ್ರೀಂಕೋರ್ಟ್ ಈ ವಿಚಾರಣೆಯನ್ನು ಫೆ. 22 ಕ್ಕೆ ಮುಂದೂಡಿದೆ. ಹೊಸ ಮೀಸಲು ನೀತಿ ಪ್ರಕಟಿಸಿ ಬಿಬಿಎಂಪಿ ಚುನಾವಣೆ ನಡೆಸಲು ಕಾಲಾವಕಾಶಬೇಕು. ಪರೀಕ್ಷೆಗಳ ನಡೆಯುವುದರಿಂದ ಹೈಕೋರ್ಟ್ ಸೂಚನೆಯಂತೆ ಮಾರ್ಚ್ ಅಂತ್ಯದೊಳಗೆ ಚುನಾವಣೆ ನಡೆಸಲು ಅಸಾಧ್ಯ. ಅದಕ್ಕಾಗಿ ತಡೆಯಾಜ್ಞೆ ನೀಡಬೇಕು ಎಂದು ರಾಜ್ಯ ಸರಕಾರ ಸುಪ್ರೀಂಕೋರ್ಟ್ ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿತ್ತು. id='are-slot-1' class='oiad oi-axt oiadv'> id='top-searched-articles'>ಗುರುವಾರ
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್, ಸರಕಾರದ ಆದೇಶದಂತೆ ಚುನಾವಣೆ ನಡೆಸುವುದಾಗಿ ಈ ಹಿಂದೆ ಹೇಳಿದೆ. ಆದ್ದರಿಂದ ಚುನಾವಣೆಗೆ ತಡೆಯಾಜ್ಞೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.











Click it and Unblock the Notifications