ಬೆಂಗಳೂರಿನಲ್ಲಿ ಆನ್ ಲೈನ್ ಗೇಮಿಂಗ್ ಝಿಂಗ
ಸಾನ್
ಫ್ರಾನ್ಸಿಕೋ, ಫೆ. 18 : ಇಂಟರ್ ನೆಟ್ ನಲ್ಲಿ ಆನ್ ಲೈನ್ ಗೇಮಿಂಗ್ ಗೆ ಹೆಸರುವಾಸಿಯಾಗಿರುವ ಝಿಂಗ ಕಂಪನಿ ಮೊಟ್ಟ ಮೊದಲ ಬಾರಿಗೆ ಅಮೆರಿಕ ಹೊರತುಪಡಿಸಿ ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ಆರಂಭಿಸಲು ನಿರ್ಧರಿಸಿದೆ. ಇಂಟರ್ ನೆಟ್ ನಲ್ಲಿ ಈಗಾಗಲೇ ವಿವಿಧ ಗೇಮ್ ಗಳ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿರುವ ಝಿಂಗ ಇದೀಗ ಝಿಂಗ ಇಂಡಿಯಾ ಎಂಬ ಹೆಸರಿನಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸಲಿದೆ. id="toptextpromo">ಆನ್
ಲೈನ್ ಗೇಮಿಂಗ್ ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಸುಮಾರು ಶೇ.40 ಮಂದಿ ಇಂಟರ್ ನೆಟ್ ಉಪಯೋಗಿಸುವವರು ಈ ಗೇಮ್ ಗಳನ್ನು ಆಡುತ್ತಾರೆ. ಒಟ್ಟಾರೆ ಇಂಟರ್ ನೆಟ್ ಉಪಯೋಗಿಸುವವರಲ್ಲಿ ಶೇ. 81 ರಷ್ಟು ಮಂದಿ ಈ ಆನ್ ಲೈನ್ ಗೇಮ್ ಗಳನ್ನು ಆಡುತ್ತಿದ್ದು, ಅಮೆರಿಕ, ಚೀನಾ ಹೊರತುಪಡಿಸಿದರೆ ಭಾರತದಲ್ಲಿ ಹೆಚ್ಚು ಆನ್ ಲೈನ್ ಗೇಮ್ ಗಳನ್ನು ಆಡುತ್ತಾರೆ. id='are-slot-1' class='oiad oi-axt oiadv'> id='top-searched-articles'>ಮುಖ್ಯವಾಗಿ
ಫಾರ್ಮಮಿಲ್ಲಾ, ಮಾಫಿಯಾ ವಾರ್ಸ್, ಕಾಫಿ ವರ್ಲ್ಡ್ ಮತ್ತು ಫಿಶ್ ವಿಲ್ಲಾ ಗೇಮ್ ಗಳು ಬಹು ಜನಪ್ರಿಯ ಆಟಗಳಾಗಿವೆ. ಭಾರತದಲ್ಲೇ ಝಿಂಗ ಕಚೇರಿ ಆರಂಭವಾದ ನಂತರ ಈ ಆಟಗಳು ಇನ್ನಷ್ಟು ಜನಪ್ರಿಯತೆ ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಝಿಂಗ ಕಂಪನಿ ಸಿಇಓ ಮಾರ್ಕ್ ಪಿಂಕಸ್ ಹೇಳುತ್ತಾರೆ. ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಭಾರತದ ಬೆಂಗಳೂರಿನಲ್ಲಿ ಝಿಂಗ ಕಚೇರಿ ಆರಂಭಿಸುತ್ತಿರುವ ಸಂತಸ ತಂದಿದೆ ಅವರು ಹೇಳಿದರು.











Click it and Unblock the Notifications