ಷೇರುಪೇಟೆಯಲ್ಲಿ ಎಲ್ಐಸಿ ಹೂಡಿಕೆ
ಬೆಂಗಳೂರು,
ಫೆ. 17 : ದೇಶದ ಅತಿದೊಡ್ಡ ವಿಮೆ ಕಂಪನಿ ಎಲ್ ಐಸಿ ಮಾರ್ಚ್ ಅಂತ್ಯದ ವೇಳೆಗೆ ಷೇರುಪೇಟೆಯಲ್ಲಿ 10 ಸಾವಿರ ಕೋಟಿ ರುಪಾಯಿ ಬಂಡವಾಳ ಹೂಡುವುದಾಗಿ ಹೇಳಿದೆ. ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ವಾರ್ಷಿಕ 60ಸಾವಿರ ಕೋಟಿ ರುಪಾಯಿ ಹೂಡಿದಂತಾಗಿದೆ. id="toptextpromo">ಷೇರು
ಮಾರುಕಟ್ಟೆಯಲ್ಲಿ ಎಲ್ಐಸಿ ಬಂಡವಾಳ ಈಗಾಗಲೇ 50 ಸಾವಿರ ಕೋಟಿ ರುಪಾಯಿ ದಾಟಿದೆ. 2009-10ರ ಕೊನೆಯ ವೇಳೆಗೆ 55,000 -60,000ಕೋಟಿ ರುಪಾಯಿ ಹೂಡುವುದು ನಮ್ಮ ಗುರಿಯಾಗಿದೆ ಎಂದು ಎಲ್ ಐಸಿ ಕಾರ್ಯಕಾರಿ ನಿರ್ದೇಶಕ ಎನ್ ಮೋಹನ್ ರಾಜ್ ಹೇಳಿದ್ದಾರೆ. ಎಲ್ ಐಸಿ 2008-09 ರಲ್ಲಿ 40,300 ಕೋಟಿ ರುಪಾಯಿಗಳನ್ನು ಹೂಡಿತ್ತು. id='are-slot-1' class='oiad oi-axt oiadv'> id='top-searched-articles'>ಎಲ್ಐಸಿ
ಹೂಡಿಕೆಯ ಘೋಷಣೆ ಹೊರಬೀಳುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಸಂಭ್ರಮ ಕಾಣಿಸಿತು. ಹಲವು ಕಂಪನಿಗಳ ಷೇರುಗಳಲ್ಲಿ ಎಲ್ ಐಸಿ ಹೂಡಿದೆ. ಸಾರ್ವಜನಿಕ ಸ್ವಾಮ್ಯದ ಪ್ರಾಥಮಿಕ ಷೇರು ಬಿಡುಗಡೆಯಲ್ಲಿ ಕೂಡ ಎಲ್ಐಸಿ ಬಂಡವಾಳ ಹೂಡಿದೆ. ಎನ್ ಟಿಪಿಸಿಯಲ್ಲಿ ಅತ್ಯದಿಕ ಹೂಡಿಕೆಯನ್ನು ಎಲ್ಐಸಿ ನಡೆಸಿದೆ. ಇತರೆ ಪಿಎಸ್ ಯೂಗಳಲ್ಲೂ ಎಲ್ಐಸಿ ಬಂಡವಾಳ ಹೂಡಲಿದೆ ಎಂದು ಮೋಹನ್ ರಾಜ್ ಹೇಳಿದರು.











Click it and Unblock the Notifications