ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಇಲ್ಲ
ನವದೆಹಲಿ,
ಫೆ.15: ಇಂಧನ ದರ ಹೆಚ್ಚಳ ಕುರಿತು ಮಿತ್ರ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ದರ ಹೆಚ್ಚಿಸದಿರಲು ಯುಪಿಎ ಸರಕಾರ ತೀರ್ಮಾನಿಸಿದೆ. ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಹಾಗೂ ಪೆಟ್ರೋಲಿಯಂ ಸಚಿವ ಮುರಳಿ ದೇವೂರಾ ತೈಲ ದರ ಕುರಿತು ಭಾನುವಾರ ಚರ್ಚಿಸಿದ್ದರು. id="toptextpromo">ತೈಲ
ದರ ಹೆಚ್ಚಳ ಕುರಿತು ಒಮ್ಮತಕ್ಕೆ ಬರುವಲ್ಲಿ ಇಬ್ಬರೂ ವಿಫಲವಾದ್ದರಿಂದ ಸದ್ಯಕ್ಕೆ ದರ ಹೆಚ್ಚಳ ಮಾಡಲಾಗುತ್ತಿಲ್ಲ. ಪೆಟ್ರೋಲ್ ಬೆಲೆ ಹೆಚ್ಚಿಸುವ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ದೇವೂರಾ ಸುದ್ದಿಗಾರರಿಗೆ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕೆಲದಿನಗಳ
ಹಿಂದಷ್ಟೇ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಹಾಒಗೊ ಅಡುಗೆ ಅನಿಲದ ದರಗಳನ್ನು ಏರಿಸುವ ಕುರಿತು ಚಿಂತನೆ ನಡೆಸಿತ್ತು. ಪೆಟ್ರೋಲ್ ದರ ಹೊರತುಪಡಿಸಿ ಇನ್ನಾವುದೇ ತೈಲೋತ್ಪನ್ನಗಳ ದರ ಬದಲಾವಣೆ ಮಾಡಲೇಬಾರದು ಎಂದು ಅಂಗಪಕ್ಷಗಳು ಬಿಗಿ ನಿಲುವು ತಾಳಿವೆ ಎಂದು ಹೇಳಲಾಗಿದೆ.











Click it and Unblock the Notifications