ಮುಂಬೈನಲ್ಲಿ ಐದರ ಬಾಲಕಿಯ ಅತ್ಯಾಚಾರ ಕೊಲೆ

ಏಳು ಮಹಡಿಯ ಕಟ್ಟಡದ ಮೆಟ್ಟಿಲ ಕೆಳಗೆ ಗೋಣಿಚೀಲ ಬಿದ್ದಿದ್ದನ್ನು ಕಟ್ಟಡ ವಾಸಿಗಳು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಹತ್ಯೆಗೀಡಾಗಿದ್ದ ಬಾಲಕಿಯ ತಂದೆ ಕೂಡ ಮಗಳು ಕಾಣೆಯಾಗಿದ್ದಾಳೆಂದು ಸೋಮವಾರ, ಫೆ.8ರಂದು ಪೊಲೀಸರಿಗೆ ದೂರು ನೀಡಿದ್ದರೆಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
"ಗೋಣಿಚೀಲ ಬಿಚ್ಚಿ ನೋಡಿದಾಗ ಕಾಣೆಯಾಗಿದ್ದ ಬಾಲಕಿ ಅದರಲ್ಲಿ ಕಂಡುಬಂದಿದ್ದಾಳೆ. ಅವಳನ್ನು ಕುತ್ತಿಗೆ ಹಿಸುಕಲಾಗಿದ್ದು, ತಲೆಯನ್ನು ಗೋಡೆಗೆ ಘಟ್ಟಿಸಿದ್ದರಿಂದ ಆಕೆಯ ಸಾವು ಸಂಭಿಸಿರಬಹುದು" ಎಂದು ಉಪ ಆಯುಕ್ತ ದಿಲೀಪ್ ಸಾವಂತ್ ಹೇಳಿದ್ದಾರೆ. ವೈದ್ಯಕೀಯ ಪರೀಕ್ಷೆ ಕೂಡ ಆಕೆಯ ಮೇಲೆ ಅತ್ಯಾಚಾರ ಸಂಭಿಸಿರುವುದನ್ನು ದೃಢಪಡಿಸಿವೆ.
ಈ ಘಟನೆಯಿಂದ ಕುರ್ಲಾ ನಾಗರಿಕರು ತೀವ್ರ ಕಳವಳಕ್ಕೀಡಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವ ಮೂರನೇ ಘಟನೆಯಿದು. ಒಂದು ವರ್ಷದ ಹಿಂದೆ ಏಳು ವರ್ಷದ ಬಾಲಕಿಯೊಬ್ಬಳು ಕಾಣೆಯಾಗಿದ್ದಳು. ಇಲ್ಲಿಯವರೆಗೂ ಆಕೆಯನ್ನು ಪತ್ತೆ ಮಾಡಲಾಗಿಲ್ಲ. ಆರು ತಿಂಗಳ ಹಿಂದೆ ಕೂಡ ಆರು ವರ್ಷದ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು ಎಂದು ಹೆಸರು ಹೇಳಲಿಚ್ಛಿಸದ 45 ವರ್ಷದ ನಾಗರಿಕರು ಮೇಲಿಂದ ಮೇಲೆ ಘಟಿಸುತ್ತಿರುವ ಇಂತಹ ವಿದ್ಯಮಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications