ಬಿಎಂ ಪಾಟೀಲ್ ಮೆಡಿಕಲ್ ಕಾಲೇಜ್ ಮಾನ್ಯತೆ ರದ್ದು ?
ನವದೆಹಲಿ,
ಫೆ. 9 : ಭಾರತೀಯ ವೈದ್ಯಕೀಯ ಮಂಡಳಿ ನಿಗದಿಪಡಿಸಿರುವ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಬಿಜಾಪುರದ ಬಿ ಎಂ ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ ಸೇರಿದಂತೆ ದೇಶದ 11 ವೈದ್ಯಕೀಯ ಕಾಲೇಜ್ ಗಳ ಸ್ಥಿತಿ ಡೋಲಾಯಮಾನವಾಗಿದೆ. ಇನ್ನೆರಡು ತಿಂಗಳಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸದಿದ್ದರೆ ಕಾಲೇಜಿನ ಮಾನ್ಯತೆ ರದ್ದುಗೊಳಿಸಲಾಗುವುದು ಎಂದು ವೈದ್ಯಕೀಯ ಮಂಡಳಿ ಸಂಬಂಧಪಟ್ಟ ಕಾಲೇಜುಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. id="toptextpromo">ದೇಶದ
11 ವೈದ್ಯಕೀಯ ಕಾಲೇಜುಗಳ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಎದುರಿಸುತ್ತಿವೆ. ಈ ಬಗ್ಗೆ ಈಗಾಗಲೇ ಅನೇಕ ಬಾರಿ ಎಚ್ಚರಿಕೆಯನ್ನು ನೀಡಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇನ್ನೆರಡು ತಿಂಗಳ ತಿಂಗಳು ಕಾಲಾವಕಾಶ ನೀಡಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ನಿಗದಿತ ಸಮಯದಲ್ಲಿ ಕಾಲೇಜು ಆಡಳಿತ ಮಂಡಳಿ ಅಗತ್ಯ ಸೌಲಭ್ಯಗಳನ್ನು ಒದಗಿಸದಿದ್ದರೆ ಕಾಲೇಜಿನ ಮಾನ್ಯತೆಯನ್ನು ರದ್ದುಗೊಳಿಸಲಾಗುವುದು ಎಂದು ವೈದ್ಯಕೀಯ ಮಂಡಳಿಯ ಅಧ್ಯಕ್ಷ ಕೇತನ್ ದೇಸಾಯಿ ಎಚ್ಚರಿಕೆ ನೀಡಿದ್ದಾರೆ. ಈ 11 ಕಾಲೇಜುಗಳಲ್ಲಿ ಸುಮಾರು 1300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಎಂ
ಪಾಟೀಲ್ ವೈದ್ಯಕೀಯ ಕಾಲೇಜು(ಬಿಜಾಪುರ), ಜಿಎಸ್ ವಿಎಂ ಮೆಡಿಕಲ್ ಕಾಲೇಜ್(ಕಾನ್ಪುರ್), ಎಸ್ಎನ್ ಮೆಡಿಕಲ್ ಕಾಲೇಜ್(ಆಗ್ರಾ), ಎಂಎಲ್ ಎನ್ ಮೆಡಿಕಲ್ ಕಾಲೇಜ್(ಅಲಹಾಬಾದ್), ಗುರುಗೋವಿಂದಸಿಂಗ್ ಮೆಡಿಕಲ್ ಕಾಲೇಜ್(ಫರೀದಕೋಟ್), ಎಲ್ಎಲ್ ಆರ್ ಎಂ ಮೆಡಿಕಲ್ ಕಾಲೇಜ್(ಮೀರತ್), ಮಹಾರಾಷ್ಟ್ರ ಇಸ್ಟಿಟ್ಯೂಟ್ ಮೆಡಿಕಲ್ ಸೈನ್ಸ್(ಲಾತೂರ್), ಜೆಎನ್ ಮೆಡಿಕಲ್ ಕಾಲೇಜು(ಅಲೀಗಢ್), ವಿನಾಯಕ ಮಿಷನ್ಸ್ ಮೆಡಿಕಲ್ ಕಾಲೇಜ್(ಪಾಂಡಿಚೇರಿ).











Click it and Unblock the Notifications