ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮ ಯಾವತ್ತೂ ಕೆಡುಕನ್ನು ಬಯಸಿಲ್ಲ:ಯುಆರ್ಎ

By Rajendra
|
Google Oneindia Kannada News

Dr UR Ananthamurthy
ಬೆಂಗಳೂರು, ಫೆ. 8 : ಧರ್ಮಗಳು ಯಾವತ್ತೂ ಕೆಡುಕನ್ನು ಬಯಸಿಲ್ಲ. ಅದನ್ನು ಅರಿಯುವ ಮಾರ್ಗದಲ್ಲಿ ಎಡವಲಾಗಿದೆ. ಹಿಂದೂ ಮುಸ್ಲಿಂ ಜನಾಂಗದ ನಡುವೆ ಸೂಕ್ತ ಮಾತುಕತೆ ಮತ್ತು ಸಾಮರಸ್ಯ ಇದ್ದರೆ ಮಾತ್ರ ಕಬೀರ ಹುಟ್ಟುತ್ತಾನೆ ಇಲ್ಲವಾದಲ್ಲಿ ಮೋದಿ ಹುಟ್ಟುತ್ತಾನೆ. ದೇಶದ ಪರಿಕಲ್ಪನೆ ಆಡ್ವಾಣಿ ಮತ್ತು ನರೇಂದ್ರ ಮೋದಿ ತಿಳಿದ ರೀತಿಯಲ್ಲಿಲ್ಲ ಎಂದು ಖ್ಯಾತ ಸಾಹಿತಿ ಡಾ. ಯು. ಆರ್ ಅನಂತಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಬಸವನಗುಡಿಯ ಅಂಕಿತ ಪ್ರಕಾಶನ ಹಮ್ಮಿಕೊಂಡಿದ್ದ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ, ತನಗೆ ಎಲ್ಲವೂ ತಿಳಿದಿರುತ್ತದೆ ಎನ್ನುವ ದುರಹಂಕಾರ ಧರ್ಮಕ್ಕಿರುತ್ತದೆ. ಅದೇ ದುರಹಂಕಾರ ಇಂದು ತಂತ್ರಜ್ಞಾನದಿಂದಾಗಿ ವಿಜ್ಞಾನಕ್ಕೆ ಬಂದಿದೆ. ವಿಜ್ಞಾನಿಗಳು ತಮ್ಮನ್ನು ಪರಿಪೂರ್ಣರೆಂದು ಭಾವಿಸಿದ್ದಾರೆ. ಇವರನ್ನು ಪ್ರಶ್ನಿಸಲೇ ಬೇಕಾಗಿದೆ. ಸೂಫಿ ಸಂತರು ಇಸ್ಲಾಂ ಧರ್ಮದ ರಾಜರನ್ನು ವಿರೋಧಿಸುತ್ತಲೇ ಬಂದರು. ಇವರ ಜೀವನ ಚರಿತ್ರೆ ನೋಡಿದಾಗ ಅಂತಃಕರಣದ ಅರಿವುಎಲ್ಲರಿಗೂ ಆಗುತ್ತದೆ ಎಂದು ಯುಆರ್ಎ ಹೇಳಿದರು.

ಬಿಟಿ ಬದನೆ ಕೂಡಾ ತಂತ್ರಜ್ಞಾನದ ಸಹಕಾರದಿಂದ ವಿಜ್ಞಾನ ಮಾಡಿದ ಸೃಷ್ಟಿ, ಇದರ ಪರಿಣಾಮ ಏನಾಗಲಿದೆ ಎಂದು ಎಲ್ಲರಿಗೂ ತಿಳಿದಿದೆ. ಪ್ರಶ್ನಾತೀತವಾದರೆ ಪ್ರತಿಯೊಂದು ಮಾರಕವಾಗಿ ಪರಿಣಮಿಸುತ್ತದೆ. ಸಾಹಿತ್ಯದ ವಿಷಯದಲ್ಲಿ ರಾಜಕೀಯ ಪ್ರವೇಶ ಮಾಡಿದ್ದಲ್ಲಿ ಸಾಹಿತ್ಯದ ಪ್ರಭಾವವನ್ನು ಹಾಳುಮಾಡುತ್ತದೆ ಎಂದು ಅನಂತ ಮೂರ್ತಿ ವಿಷಾದ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X