ಲೈಂಗಿಕ ಕಿರುಕುಳ ಆರೋಪಿ ರಾಥೋಡ್‌ಗೆ ಇರಿತ

ಅವರ ಮೇಲೆ ಹಲ್ಲೆ ಮಾಡಿದ ಯುವಕನನ್ನು 25ರ ಹರೆಯದ ಉತ್ಸವ್ ಶರ್ಮಾ ಎಂದು ಗುರುತಿಸಲಾಗಿದೆ. ಪತ್ರಕರ್ತರ ಗುಂಪಿನಲ್ಲಿ ಕಾಣಿಸಿಕೊಂಡ ಈತ, ನ್ಯಾಯಾಲಯದಿಂದ ರಾಥೋಡ್ ಹೊರಬರುತ್ತಿದ್ದ ಸಂದರ್ಭದಲ್ಲಿ ಹಲ್ಲೆ ಮಾಡಿದ್ದಾನೆ. ಯುವಕ ಸತತ ಮೂರು ಬಾರಿ ರಾಥೋಡ್ ಅವರ ಮುಖಕ್ಕೆ ಇರಿದಿದ್ದಾನೆ. ತಕ್ಷಣವೇ ರಾಥೋಡ್ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದ್ದು, ಗಾಯದ ಪ್ರಮಾಣ ದೊಡ್ಡದಾಗಿ ಆಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ರಾಥೋಡ್ ಮೇಲೆ ದಾಳಿ ಮಾಡಿದವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಈತ ಉತ್ತರ ಪ್ರದೇಶದ ವಾರಣಾಸಿ ಮೂಲದವನಾಗಿದ್ದು, ಅಹಮದಾಬಾದ್‌ನಲ್ಲಿ ಸಿನಿಮಾ ನಿರ್ಮಾಣ ಕುರಿತು ಅಧ್ಯಯನ ನಡೆಸುತ್ತಿದ್ದೇನೆ ಮತ್ತು ರುಚಿಕಾ ಲೈಂಗಿಕ ಕಿರುಕುಳದ ಬಗ್ಗೆ ಪುಸ್ತಕವೊಂದನ್ನು ಬರೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
14ರ ಹರೆಯದ ರುಚಿಕಾಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನು ರಾಥೋಡ್ ಮೇಲೆ ಹೊರಿಸಲಾಗಿದ್ದು, ಆಕೆ ಮೂರು ವರ್ಷದ ನಂತರ 90ರ ದಶಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಆರೋಪಿಯೆಂದು ಸಾಬೀತಾಗಿದ್ದ ರಾಥೋಡ್ ಮೇಲೆ ಕನಿಷ್ಟ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದ ಹಿನ್ನೆಲೆಯಲ್ಲಿ ಮತ್ತೆ ಹೊಸ ಪ್ರಕರಣಗಳನ್ನು ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ.












Click it and Unblock the Notifications