ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಯಾಯಿತಿ ದರದಲ್ಲಿ ತಿರುಪತಿಗೆ ಬಸ್ ಸೌಲಭ್ಯ

By Rajendra
|
Google Oneindia Kannada News

Tirumala Tirupati
ಬೆಂಗಳೂರು, ಫೆ.7: ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಇಚ್ಛಿಸುವ ಬೆಂಗಳೂರಿನ ನಾಗರಿಕರಿಗೊಂದು ಸಂತಸದ ಸುದ್ದಿ. ತಿರುಮಲ ತಿರುಪತಿಗೆ ರಿಯಾಯಿತಿ ದರದಲ್ಲಿ ಬಸ್ ಸೌಲಭ್ಯವನ್ನು ಮುಜರಾಯಿ ಅಭಿವೃದ್ಧಿ ಮಂಡಳಿ ಕಲ್ಪಿಸಲು ನಿರ್ಧರಿಸಿದೆ.

ಪ್ರಯಾಣ ದರದ ಅರ್ಧ ಬೆಲೆಗೆ (ಅಂದಾಜು ರು.250) ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸಿ ನಂತರ ವಾಪಸು ಕರೆತರಲಾಗುವುದು ಎಂದು ಮಂಡಳಿ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ ತಿಳಿಸಿದ್ದಾರೆ. ದಾನಿಗಳು ಐದು ಬಸ್ಸುಗಳನ್ನು ಉಚಿತವಾಗಿ ನೀಡಿದ್ದು ಅವುಗಳನ್ನು ಭಕ್ತಾದಿಗಳ ಅನುಕೂಲಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಮಾರ್ಚ್ 16ರ ಯುಗಾದಿ ಹಬ್ಬದಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಪ್ರತಿನಿತ್ಯ ಈ ಸೇವೆ ನಿರಂತರಾವಾಗಿ ಇರುತ್ತದೆ. ಪ್ರತಿದಿನ ರಾತ್ರಿ ಬಿಡುವ ಬಸ್ ಮಾರನೆ ದಿನ ಸಂಜೆ ನಗರಕ್ಕೆ ವಾಪಸಾಗಲಿದೆ. ಪ್ರತಿನಿತ್ಯ ಐದು ಬಸ್ ಗಳು ತಿರುಪತಿಗೆ ತೆರಳಲಿವೆ. ದರ್ಶದ ಜವಾಬ್ದಾರಿಯನ್ನು ಮಾತ್ರ ಭಕ್ತರೆ ನೋಡಿಕೊಳ್ಳಬೇಕು ಎಂದು ಅವರು ವಿವರ ನೀಡಿದರು.

ಶಿವರಾತ್ರಿಗೆ ಪವಿತ್ರ ಗಂಗಾಜಲ
ಈ ಬಾರಿಯ ಶಿವರಾತ್ರಿ ಹಬ್ಬಕ್ಕೂ ಪವಿತ್ರ ಗಂಗಾಜಲವನ್ನು ಭಕ್ತಾದಿಗಳಿಗೆ ನೀಡಲಿರುವುದಾಗಿ ಕೃಷ್ಣಯ್ಯ ಶೆಟ್ಟಿ ತಿಳಿಸಿದ್ದಾರೆ. ಹಿಮಾಲಯದ ಗಂಗೋತ್ರಿಯಿಂದ 2,500 ಕ್ಯಾನ್ ಗಳಲ್ಲಿ ಗಂಗಾಜಲವನ್ನು ತರಲಾಗಿದ್ದು ಭಕ್ತಾದಿಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ದೇವಾಲಯಗಳಲ್ಲಿ ಗಂಗಾಜಲವನ್ನು ವಿತರಿಸಲಾಗುವುವುದು. ಶಿವರಾತ್ರಿಯ ದಿನ(ಫೆಬ್ರವರಿ 12) ಸಂಜೆ 6 ಗಂಟೆಯವರೆಗೂ ಗಂಗಾಜಲವನ್ನು ವಿತರಿಸಲಾಗುತ್ತದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X