ಆಟೋರಿಕ್ಷಾ ಪ್ರಯಾಣಿಕರನ್ನು ವಂಚಿಸಿದರೆ ಕ್ರಮ

ಇದಲ್ಲದೆ, ಡಿಜಿಟಲ್ ಫೇರ್ ಮೀಟರ್ ಗಳನ್ನೂ ಸಹ ಟ್ಯಾಂಪರ್ ಮಾಡುತ್ತಿರುವ ಬಗ್ಗೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಒಂದು ವರದಿಯು ಪ್ರಸಾರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ಸಾರಿಗೆ ಇಲಾಖೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಇಂತಹ ಆಟೋರಿಕ್ಷಾಗಳ ಪರಿಶೀಲನೆಗಾಗಿ ಜಂಟಿ ತಪಾಸಣಾ ಕಾರ್ಯವನ್ನು ನಡೆಸಲಾಗುವುದು.
ಯಾವುದೇ ಆಟೋರಿಕ್ಷಾ ಮೀಟರ್ ಟ್ಯಾಂಪರ್ ಮಾಡಿರುವುದು ಕಂಡುಬಂದಲ್ಲಿ, ಅಂತಹ ಆಟೋರಿಕ್ಷಾ ಹೊಂದಿರುವ ರಹದಾರಿಯನ್ನು ಅಮಾನತ್ತು/ ರದ್ದುಪಡಿಸುವ ಕ್ರಮ ವಹಿಸುವುದಲ್ಲದೆ, ಚಾಲಕರು ಮತ್ತು ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ.)ಪ್ರಕಾರ ಕ್ರಿಮಿನಲ್ ಮೊಕದ್ದಮೆಯನ್ನೂ ಸಹ ದಾಖಲಿಸಲಾಗುವುದೆಂದು ಸಾರಿಗೆ ಆಯುಕ್ತರ ಕಛೇರಿ ಪ್ರಕಟಣೆ ತಿಳಿಸಿದೆ.
ಕಿರಿಕ್ ಮಾಡೋ ಆಟೋ ಚಾಲಕರನ್ನು ಸುಮ್ಮನೇ ಬಿಡಬೇಡಿ!












Click it and Unblock the Notifications