ವಿಧಾನಸೌಧ ಖಾಲಿ ಮಾಡಿಸುತ್ತಿದ್ದೆ : ಹೆಗಡೆ
ಬೆಂಗಳೂರು
ಫೆ 3 : ಭ್ರಷ್ಟರನ್ನು ಶಿಕ್ಷಿಸುವ ಮತ್ತು ಭ್ರಷ್ಟಾಚಾರವನ್ನು ಹತ್ತಿಕ್ಕಲು ನನಗೇನಾದರೂ ಪರಮಾಧಿಕಾರ ಕೊಟ್ಟಿದ್ದರೆ ವಿಧಾನಸೌಧ ಮತ್ತು ವಿಕಾಸಸೌಧ ಖಾಲಿ ಮಾಡಿಸುತ್ತಿದ್ದೆ ಎಂದು ಲೋಕಾಯುಕ್ತ ನ್ಯಾ. ಸಂತೋಷ್ ಹೆಗಡೆ ಗುಡುಗಿದ್ದಾರೆ. id="toptextpromo">ಲೋಕಾಯುಕ್ತ
ಸಂಸ್ಥೆಗೆ ಅಧಿಕಾರ ನೀಡದೆ ಇರುವ ಸರಕಾರದ ಕ್ರಮಕ್ಕೆ ಹೆಗಡೆ ಬೇಸರ ವ್ಯಕ್ತಪಡಿಸಿ, ಸರ್ವಾಧಿಕಾರ ನೀಡಿ ಎಂದು ನಾವೇನೂ ಕೇಳಿಲ್ಲ. ಭ್ರಷ್ಟರನ್ನು ಶಿಕ್ಷಿಸಲು ಮತ್ತಷ್ಟು ಅಧಿಕಾರ ಕೊಡಿ ಎಂದಿದ್ದೆ ಎಂದು ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಆಡಳಿತ
ಮತ್ತು ಭ್ರಷ್ಟಾಚಾರ' ಕುರಿತು ಸರಕಾರಿ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡುತ್ತಾ, ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ 1456 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಸ್ವಿಸ್ ಬ್ಯಾಂಕ್ ಹೇಳಿದೆ. ಇದರಿಂದ ಬರುವ ಬಡ್ಡಿ ಹಣದಲ್ಲಿ ಕೇವಲ 24 ಗಂಟೆಗಳಲ್ಲಿ ದೇಶದ ಸಾಲವನ್ನು ತೀರಿಸಬಹುದು ಮತ್ತು ಸುಮಾರು 700 ಜಿಲ್ಲೆಗಳ ಅಭಿವೃದ್ದಿ ಕಾರ್ಯ ನಡೆಸಬಹುದು ಎಂದು ಅವರು ಅಭಿಪ್ರಾಯಪಟ್ಟರು.











Click it and Unblock the Notifications