ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಸಮ್ಮೇಳನ ಮಳಿಗೆ ನೋಂದಣಿ ಆರಂಭ

By Mrutyunjaya Kalmat
|
Google Oneindia Kannada News

Nallur Prasad
ಬೆಂಗಳೂರು, ಜ. 22 : ಫೆಬ್ರವರಿ 19 ರಿಂದ 21 ರವರೆಗೆ ಗದಗನಲ್ಲಿ ನಡೆಯಲಿರುವ 76 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ.

10x 10 ಅಳತೆಯ ಒಂದು ಮಳಿಗೆಗೆ ಮೂರು ದಿನಗಳಿಗೆ, ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಮಳಿಗೆಗೆ 1000 ರುಪಾಯಿಗಳ ಬಾಡಿಗೆಯನ್ನು, ಒಂದಕ್ಕಿಂತ ಹೆಚ್ಚಿನ ಪ್ರತಿ ಮಳಿಗೆಗೆ ತಲಾ ರೂ 1000 ಹಾಗೂ ವಾಣಿಜ್ಯ ಮಳಿಗೆಗೆ- ಪ್ರತಿ ಒಂದು ಮಳಿಗೆಗೆ ರೂ 3,000 ನಿಗದಿಗೊಳಿಸಲಾಗಿದೆ. ಮಳಿಗೆ ನೋಂದಣೆ ಮಾಡಿಸಿಕೊಳ್ಳಲು ಕೊನೆಯ ದಿನಾಂಕ 11 ಫೆಬ್ರವರಿ 2010.

ಪ್ರತಿನಿಧಿ ನೋಂದಣಿ : ಫೆಬ್ರವರಿ 19, 20 ಮತ್ತು 21 ರಂದು ಗದಗನಲ್ಲಿ ನಡೆಯಲಿರುವ 76ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಆಗಮಿಸಲು ಬಯಸುವ ಸಾಹಿತ್ಯಾಸಕ್ತರಿಗೆ ಮೂರು ದಿನಗಳ ಊಟ, ವಸತಿ ಸೇರಿದಂತೆ ನೋಂದಣೆ ಶುಲ್ಕ ರೂ 150 ಗಳನ್ನು ನಿಗದಿಪಡಿಸಲಾಗಿದೆ.

ಆಸಕ್ತರು 'ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು -18 (ದೂರವಾಣಿ : 080-26612991, 26623584) ಅಥವಾ 'ಪ್ರಧಾನ ಕಾರ್ಯದರ್ಶಿ, ಸ್ವಾಗತ ಸಮಿತಿ, ಅಖಿಲ ಭಾರತ 76ನೇಯ ಕನ್ನಡ ಸಾಹಿತ್ಯ ಸಮ್ಮೇಳನ, ಗಾಂಧಿ ವೃತ್ತ, ತಾಲ್ಲೂಕು ಪಂಚಾಯಿತಿ ಆವರಣ, ಗದಗ' (ದೂರವಾಣಿ: 08371-262364/262708) ಈ ಹೆಸರುಗಳಲ್ಲಿ ಡಿ.ಡಿ. ಅಥವಾ ನಗದು ಹಣ ಪಾವತಿಸಬಹುದೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X