ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಸ್ಐಎಲ್ ಇಂಪ್ಯಾಕ್ಟ್ : ಒಂದೇ ಪೆಗ್ ಇಬ್ಬರಿಗೆ ಕಿಕ್

By * ಡಿ.ಟಿ. ತಿಲಕ್‌ರಾಜ್
|
Google Oneindia Kannada News

MSIL wine outlet in Channapattana
ಚನ್ನಪಟ್ಟಣ, ಜ. 20 : ಎಲ್ಲಾ ಬಾರ್/ವೈನ್ಸ್ ಸ್ಟೋರ್‌ಗಳಲ್ಲಿ ಎಂ.ಆರ್.ಪಿ. ದರಕ್ಕೆ ಮದ್ಯ ಲಭ್ಯ! ಇದೇನು ತಮಾಷೆ ಎಂದು ಕೊಂಡಿದ್ದೀರಾ? ಇದು ವಾಸ್ತವ.

ಪಾನಪ್ರಿಯರಿಂದ ಬಾಟಲಿಯೊಂದಕ್ಕೆ ಶೇ.10ರಷ್ಟು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಬಾರ್/ವೈನ್ಸ್ ಮಾಲೀಕರು, ಎಂಎಸ್ಐಎಲ್ ಮದ್ಯ ಮಳಿಗೆ ಆರಂಭವಾಗುವ ಮುನ್ಸೂಚನೆ ಅರಿತು ಎಂ.ಆರ್.ಪಿ. ದರಕ್ಕೆ ಮದ್ಯ ಮಾರಾಟ ಮಾಡಲು ಮುಂದಾಗಿದ್ದು, ಪಾನಪ್ರಿಯರಿಗೆ ಇದು ಬಂಪರ್ ಕೊಡುಗೆಯಾಗಿದೆ ಪರಿಣಮಿಸಿದೆ. ಹೀಗೆ ಮಾಡುವ ಮುಖಾಂತರ ಎಂಎಸ್ಐಎಲ್ ಒಂದೇ ಪೆಗ್ಗಿಗೆ ಇಬ್ಬರಿಗೆ 'ಕಿಕ್' ನೀಡಿದೆ!

ಸರ್ಕಾರದ ಸಾರಾಯಿ ನಿಷೇಧ ನೀತಿ ವೈನ್ಸ್ ಮತ್ತು ಬಾರ್ ಮಾಲೀಕರಿಗೆ ವರದಾನವಾಗಿ ಪರಿಣಮಿಸಿ, ಪ್ರತಿ 180 ಮಿ.ಲೀ. ಬಾಟಲ್‌ಗೆ ಎಂ. ಆರ್.ಪಿ ದರಕ್ಕಿಂತ 10 ರೂ. ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರು. ಈ ದಂಧೆ ತಾಲ್ಲೂಕಿನಲ್ಲಲ್ಲದೆ ರಾಜ್ಯದ ಹಲವಾರು ತಾಲ್ಲೂಕುಗಳಲ್ಲಿಯೂ ಸಹ ಅವ್ಯಾಹತವಾಗಿ ನಡೆಯುತ್ತಿತ್ತು. ಈ ಮಧ್ಯೆ ಸರ್ಕಾರಿ ಸ್ವಾಮ್ಯದ ಹಾಗೂ ಮದ್ಯ ಒಡೆತನ ಹೊಂದಿರುವ ಎಂಎಸ್ಐಎಲ್ ಸಂಸ್ಥೆ ಪ್ರತಿ ತಾಲ್ಲೂಕುಗಳಲ್ಲಿಯೂ ಮದ್ಯ ಮಳಿಗೆ ಸ್ಥಾಪಿಸಲು ನಿರ್ಧಾರ ತೆಗೆದುಕೊಂಡಿದ್ದು, ಬಾರ್/ವೈನ್ಸ್ ಮಾಲೀಕರ ನಿದ್ರೆ ಕೆಡಿಸಿತು. ಎಂಎಸ್ಐಎಲ್ ಎಂ.ಆರ್.ಪಿ. ದರಕ್ಕೆ ಮದ್ಯ ನೀಡುವುದಾಗಿ ಘೋಷಿಸಿತು.

ಈ ನಡುವೆ ಪಕ್ಕದ ರಾಮನಗರ, ಮದ್ದೂರು, ಮಂಡ್ಯಗಳಲ್ಲಿ ಎಂಎಸ್ಐಎಲ್ ಮಳಿಗೆ ಆರಂಭವಾದಾಗ ಪಾನಪ್ರಿಯರು ಭರ್ಜರಿ ಆರಂಭದೊಂದಿಗೆ ಅಭೂತಪೂರ್ವವಾಗಿ ಸ್ವಾಗತಿಸಿ, ಎಂ.ಆರ್.ಪಿ. ದರಕ್ಕೆ ಮದ್ಯ ಕೊಳ್ಳಲು ಸರತಿ ಸಾಲಿನಲ್ಲಿ ನಿಂತರು. ಇದರಿಂದ ಪ್ರೇರಿತವಾದ ಎಂಎಸ್ಐಎಲ್ ಚನ್ನಪಟ್ಟಣದಲ್ಲೂ ಸಹ ಎಂಎಸ್ಐಎಲ್ ಮಳಿಗೆ ತೆರೆಯಲು ಮುಂದಾಯಿತು. ಈ ನಡುವೆ ಇಲ್ಲಿ ಎಂಎಸ್ಐಎಲ್ ಮಳಿಗೆ ತೆರೆಯಲು ಹಲವಾರು ತೊಡಕುಗಳು ಎದುರಾದವು. ಎಂಎಸ್ಐಎಲ್ ಆಫರ್‌ನಿಂದ ಚಿಂತೆಗೀಡಾದ ವೈನ್ಸ್ ಸ್ಟೋರ್ ಮಾಲೀಕರು, ರಾಮನಗರ, ಮದ್ದೂರು, ಮಂಡ್ಯಗಳಲ್ಲಿ ದೊರೆತಂತೆ ಇಲ್ಲೂ ಸಹ ಎಂಎಸ್ಐಎಲ್ ಮಳಿಗೆಗೆ ಉತ್ತಮ ಸ್ಪಂದನೆ ದೊರೆತು ನಮ್ಮ ವ್ಯಾಪಾರಕ್ಕೆ ಕುತ್ತು ಬೀಳುವುದು ನಿಶ್ಚಿತ ಎಂಬುದನ್ನು ಮನಗಂಡು ಮುಂಜಾಗ್ರತಾ ಕ್ರಮವಾಗಿ ಎಂ.ಆರ್.ಪಿ. ದರಕ್ಕೆ ಮದ್ಯ ನೀಡಲು ಮುಂದಾಗಿದ್ದಾರೆ.

ಪಟ್ಟಣದ 3ನೇ ಅಡ್ಡರಸ್ತೆ ಯಲ್ಲಿರುವ ವೈನ್ಸ್ ಮಾಲೀಕರೊಬ್ಬರು ನಮ್ಮಲ್ಲಿ ಎಂ.ಆರ್.ಪಿ. ದರಕ್ಕೆ ಮದ್ಯ ದೊರೆಯುತ್ತದೆ ಎಂಬ ಫಲಕವನ್ನೂ ಸಹ ತಗುಲಿಸಿಕೊಂಡಿದ್ದಾರೆ. ಹಾಗೂ ಇನ್ನೂ ಕೆಲವು ವೈನ್ಸ್ ಮಾಲೀಕರು ನಾವೂ ಸಹ ಎಂ.ಆರ್.ಪಿ. ದರಕ್ಕೆ ಮದ್ಯ ನೀಡುತ್ತೇವೆಂದು ಘೋಷಿಸಿಕೊಂಡಿದ್ದಾರೆ. ಈ ಮೊದಲು ಎಂ.ಆರ್.ಪಿ. ದರ ಮತ್ತು ಅಧಿಕ ಎನ್ನುವ ವಿಚಾರಕ್ಕೆ ಪ್ರತಿನಿತ್ಯ ಒಂದಿಲ್ಲೊಂದು ಬಾರ್/ವೈನ್ಸ್‌ಗಳಲ್ಲಿ ಪಾನಪ್ರಿಯರ, ವೈನ್ಸ್ ಮಾಲೀಕರ ನಡುವೆ ವಾಗ್ವಾದ ನಡೆಯುತ್ತಿತ್ತು. ಈಗ ಅದು ತಾನಾಗೇ ನಿಂತಿದೆ. ಪಾನಪ್ರಿಯರಿಗಂತೂ ಖುಷಿಯೋ ಖುಷಿ.

ಎಂಎಸ್ಐಎಲ್ ಸಂಸ್ಥೆಯ ದಿಟ್ಟ ಕ್ರಮದಿಂದ ಸ್ಥಳೀಯ ವೈನ್ಸ್ ಮಾಲೀಕರ ಹಗಲು ದರೋಡೆಗೆ ಬ್ರೇಕ್ ಬಿದ್ದಂತಾಗಿದೆ. ಮದ್ಯಪ್ರಿಯರಿಗೆ ವ್ಯವಸ್ಥಿತ ದರದಲ್ಲಿ ಮದ್ಯ ದೊರೆಯುವಂತಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X