ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯಗ್ರಹಣ : ಬೆ. 11.12 ರಿಂದಮ. 3.13 ವರೆಗೆ

|
Google Oneindia Kannada News

Solar Ecplise
ಬೆಂಗಳೂರು, ಜ. 15 : ಶತಮಾನದ ಸುದೀರ್ಘ ಅವಧಿಯ ಕಂಕಣ ಸೂರ್ಯಗ್ರಹಣಕ್ಕೆ ದೇಶದ ಜನ ಇಂದು ಸಾಕ್ಷಿಯಾಗಲಿದ್ದಾರೆ. ಬೆಳಗ್ಗೆ 11.12ರಿಂದ ಆರಂಭವಾಗುವ ಗ್ರಹಣ ಮಧ್ಯಾಹ್ನ 3.13ರವರಗೆ ನಡೆಯಲಿದೆ. ಜಗತ್ತಿನ ಇತರೆಡೆಗಿಂತ ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದ ಆಗಸದಲ್ಲಿ ಈ ಅಪೂರ್ವ ದೃಶ್ಯ ಕಾವ್ಯ ಸ್ಪಷ್ಟವಾಗಿ ಗೋಚರಿಸಿಲಿದೆ.

ವಿಡಿಯೋ:ಶತಮಾನದ ಸುದೀರ್ಘ ಸೂರ್ಯಗ್ರಹಣ

ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಅಡ್ಡ ಬಂದಾಗ ಈ ಬೆಳವಣಿಗೆ ಘಟಿಸುತ್ತದೆ. ಈ ಸಂದರ್ಭದಲ್ಲಿ ಭೂಮಿಯಿಂದ ಎಂದಿಗಿಂತ ದೂರದಲ್ಲಿ ಇರುವ ಚಂದ್ರನಿಗೆ ತನಗಿಂತ ಬೃಹತ್ತಾದ ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಲು ಸಾಧ್ಯವಾಗದು. ಆಗ ಚಂದ್ರನ ಸುತ್ತಲೂ ಹರಡಿಕೊಳ್ಳುವ ರವಿಯ ಪ್ರಭೆ ಉಂಗುರದಾಕಾರಾದ ಬೆಂಕಿಯ ಉಂಡೆಯಂತೆ ಭಾಸವಾಗುತ್ತದೆ. ಗ್ರಹಣದ ಮಾರ್ಗ ಹಾದು ಹೋಗಲಿರುವ ಕೇರಳ, ತಮಿಳುನಾಡು, ಮಿಜೋರಾಂಗಳಲ್ಲಿ ಸ್ಪಷ್ಟವಾಗಿ ಹಾಗೂ ಉಳಿದಡೆ ಭಾಗಶಃ ಈ ದೃಶ್ಯ 10 ನಿಮಿಷಕ್ಕೂ ಹೆಚ್ಚು ಕಾಲ ನೋಡಲು ಲಭ್ಯವಾಗಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X