ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಡು ಹುಟ್ಟಿದ ಸಮಯ ಲೋಕಾರ್ಪಣೆ

|
Google Oneindia Kannada News

Ramesh Aravind
ಬೆಂಗಳೂರು, ಜ. 11 : ವಿಜಯ ಕರ್ನಾಟಕದ ಮುಖ್ಯ ಉಪಸಂಪಾದಕ ಎ ಆರ್ ಮಣಿಕಾಂತ್ ಅವರ "ಹಾಡು ಹುಟ್ಟಿದ ಸಮಯ" ಪುಸ್ತಕವನ್ನು ನಟ ರಮೇಶ್ ಅರವಿಂದ್ ಭಾನುವಾರ ಬಿಡುಗಡೆ ಮಾಡಿದರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಭಿಮಾನಿಗಳು, ಹಿತೈಷಿಗಳು, ಸಹದ್ಯೋಗಿ ಹಾಗೂ ಮಾಧ್ಯಮ ಮಿತ್ರರ ಸಮ್ಮುಖದಲ್ಲಿ ಮಣಿ ಅವರ ಹಾಡಿನ ಕೂಸು ಪುಸ್ತಕ ರೂಪದಲ್ಲಿ ಹೊರಬಂದಿತು.

ಭಾವನೆಗೆ ಸ್ಪಂದಿಸುವ ಯಾವುದೇ ಹಾಡು ಬರೆದರೂ ಜನಪ್ರಿಯವಾಗುತ್ತದೆ. ಹಾಡಿನಲ್ಲಿ ನಗಿಸುವ ಅಥವಾ ಅಳಿಸುವ ಗುಣವಿರಬೇಕು. ಒಟ್ಟಾರೆ ಅದು ಭಾವನಾತ್ಮಕವಾಗಿರಬೇಕು ಎಂದು ಪುಸ್ತಕ ಬಿಡುಗಡೆ ಮಾಡಿದ ನಟ ರಮೇಶ್ ಹೇಳಿದರು. ಜನಪ್ರಿಯ ಹಾಡು ಬರೆಯುವುದು ಬಹಳ ಕಷ್ಟದ ಕೆಲಸ. ಏಕೆಂದರೆ ಅದೊಂದು ಮ್ಯಾಜಿಕ್ ಇದ್ದಂತೆ ಅಂತಹ ಹಾಡು ಹೇಗೆ ಹುಟ್ಟತ್ತದೆ ಎಂಬುದನ್ನು ಅರಿಯಲು ಮಣಿಕಾಂತ್ ಪುಸ್ತಕ ಓದಬೇಕು ಎಂದು ಹೇಳಿದರು.

ಮಣಿಕಾಂತ್ ಶ್ರವಣ ಸಮಸ್ಯೆ ಇದೆ. ಇಂಥವರು ಹಾಡಿ ಕೇಳಿ ಅದು ಹುಟ್ಟಿದ ಸಮಯವನ್ನು ತಿಳಿದು ಬರೆಯುವುದು ನೂನ್ಯತೆ ಮೀರಿ ನಿಲ್ಲುವ ಕಾರ್ಯ. ಹಾಡಿನ ಜಾಡು ಹಿಡಿದು ಕೃತಿ ತಂದಿದ್ದು, ಕನ್ನಡದಲ್ಲಿ ಇಂತಹ ಕೆಲಸ ಮೊದಲನೆಯದಾಗಿದೆ. ಅದು ಮಣಿಕಾಂತ್ ಅವರು ಮಾಡಿದ್ದು ಶ್ಲಾಘನೀಯ ಕೆಲಸ ಎಂದು ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ ಪ್ರಶಂಸಿಸಿದರು.

ಸಿನಿಮಾವನ್ನು ಒಂದು ವಿಷಯವನ್ನಾಗಿ ಶಿಕ್ಷಣದಲ್ಲಿ ಅಳವಡಿಸಬೇಕು. ಪ್ರೌಢ ಶಾಲೆ ಅಥವಾ ಕಾಲೇಜು ಹಂತದಲ್ಲಿ ಅಳವಡಿಸಿದರೆ ಉತ್ತಮ. ಇದರಿಂದ ಸದಭಿರುಚಿಯ ಪ್ರತಿಭೆಗಳು ಹೊರಬರಲು ವೇದಿಕೆಯಾಗುತ್ತದೆ ಎಂದು ಹಿರಿಯ ಪತ್ರಕರ್ತ ಅನಂತ್ ಚಿನಿವಾರ ಅಭಿಪ್ರಾಯಪಟ್ಟರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X