ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕಿಗೆ ಚಿತ್ರಹಿಂಸೆ ನೀಡಿದ ಇನ್ಫಿ ಟೆಕಿ ಅಮಾನತು

By Staff
|
Google Oneindia Kannada News

Infy suspends employee charged with child abuse
ಬೆಂಗಳೂರು, ಜ.9: ಮನೆಗೆಲಸದ ಹುಡುಗಿ ಮೇಲೆ ಕಾದ ಎಣ್ಣೆ ಸುರಿದು ಚಿತ್ರಹಿಂಸೆಗೆ ಗುರಿಮಾಡಿದ್ದ ಸಾಫ್ಟ್ ವೇರ್ ಎಂಜಿನಿಯರ್ ಪಲ್ಲವ್ ಚಕ್ರವರ್ತಿಯನ್ನು ಇನ್ಫೋಸಿಸ್ ಅಮಾನತುಗೊಳಿಸಿದೆ.
ಘಟನೆಯನ್ನು ಅಮಾನವೀಯ ಎಂದು ಪರಿಗಣಿಸಿರುವ ಇನ್ಫೋಸಿಸ್ ಸಂಸ್ಥೆ ಕಳಂಕಿತ ಟೆಕಿ ವಿರುದ್ಧ ವಿಚಾರಣೆ ನಡೆದು ಆರೋಪಮುಕ್ತವಾಗುವವರೆಗೂ ಅಮಾನತ್ತಿನಲ್ಲಿಡಲು ತೀರ್ಮಾನಿಸಿದೆ.

ಎಚ್ ಎಸ್ ಆರ್ ಲೇಔಟ್ ನಿವಾಸಿಗಳಾದ ಪಶ್ಚಿಮ ಬಂಗಾಲ ಮೂಲದ ಪಲ್ಲವ್ ಚಕ್ರವರ್ತಿ ಹಾಗೂ ಆತನ ಪತ್ನಿ ಮನೆಗೆಲಸದ ಹುಡುಗಿಗೆ ಚಿತ್ರಹಿಂಸೆ ನೀಡಿದ್ದರು. ಕೋಲ್ಕತ್ತಾ ನಿವಾಸಿಯಾದ ದುರ್ಗಾ(15) ಎಂಬ ಹುಡುಗಿಯನ್ನು ಎರಡು ವರ್ಷದ ಮಗುವಿನ ಮೇಲ್ವಿಚಾರಣೆ ಹಾಗೂ ಮನೆಗೆಲಸದ ನಿಮಿತ್ತ ಬೆಂಗಳೂರಿಗೆ ಕರೆತಂದಿದ್ದರು.

ಆಕೆಗೆ ವಿನಾಕಾರಣ ಚಿತ್ರಹಿಂಸೆಗೆ ಗುರಿಮಾಡಿದ್ದರು. ಮನೆಯಿಂದ ಹೊರಗೆಹೋಗಲು ಬಿಡುತ್ತಿರಲಿಲ್ಲ. ಪಲ್ಲವ್ ನ ಹೆಂಡತಿ ಸಂಚಿತಾ, ಬಾಲಕಿಯ ಮೇಲೆ ಕಾದ ಎಣ್ಣೆ ಸುರಿದಿದ್ದಳು. ಈ ಎಲ್ಲಾ ವಿಷಯವನ್ನು ಅಪ್ಸಾ ಎಂಬ ಸರ್ಕಾರೇತರ ಸಂಸ್ಥೆ ಎಚ್ ಎಸ್ ಆರ್ ಪೊಲೀಸ್ ಠಾಣೆ ಪೊಲೀಸರ ಗಮನಕ್ಕೆ ತಂದಿತ್ತು. ತಕ್ಷಣ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಪಲ್ಲವ್ ಚಕ್ರವರ್ತಿ ದಂಪತಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಸಂಚಿತಾ ಮಗುವಿಗೆ ಎಚ್ 1 ಎನ್1 ಸೋಂಕು ತಗುಲಿರುವ ಕಾರಣ ಆಕೆಯನ್ನು ಜಾಮೀನ ಮೇಲೆ ಬಿಡುಗಡೆ ಮಾಡಲಾಗಿದೆ. ಪಲ್ಲವ್ ಚಕ್ರವರ್ತಿ ಮೇಲೆ ಅಸಭ್ಯ ವರ್ತನೆ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ. ಈ ನಡುವೆ ಬಾಲಕಿಗೆ ಪುನರ್ವಸತಿ ಕಲ್ಪಿಸಲು ನಾನಾ ಸರ್ಕಾರೇತರ ಸಂಸ್ಥೆಗಳು ಮುಂದೆ ಬಂದಿವೆ. ಪಲ್ಲವ್ ನ ಜಾಮೀನು ವಿಚಾರಣೆ ಅರ್ಜಿ ಮುಂದಿನ ವಾರ ಎಪಿಎಂಸಿ ನ್ಯಾಯಾಲಯದ ಮುಂದೆ ಬರಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X