ಬೆಂಗಳೂರನ್ನು ಬೆಳಗಲಿದೆ ದುಬೈ ಶಾಪಿಂಗ್ ಉತ್ಸವ

15ನೇ ದುಬೈ ಶಾಪಿಂಗ್ ಉತ್ಸವದ ರೂಪುರೇಷೆ ಮತ್ತು ಅಲ್ಲಿ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದ ದುಬೈ ಶಾಪಿಂಗ್ ಉತ್ಸವದ ಮಾರ್ಕೆಟಿಂಗ್ ಮುಖ್ಯಸ್ಥರಾಗಿರುವ ಮೊಹಮ್ಮದ್ ಕಮಾಲಿ ಅವರು, ಈ ಉತ್ಸವದ ವೈಭವ ಹಿಂದಿನ ಎಲ್ಲವನ್ನೂ ಮೀರಿಸಲಿದೆ ಎಂದು ಹೇಳಿದರು.
ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ದುಬೈಯನ್ನು ಫ್ಯಾಷನ್ ಲೋಕದ ಕೇಂದ್ರವನ್ನಾಗಿ ಮಾಡಿಸುವಲ್ಲಿ ದುಬೈ ಶಾಪಿಂಗ್ ಫೆಸ್ಟಿವಲ್ ಅಗ್ರ ಪಾತ್ರ ವಹಿಸಿದೆ. ಈ ನಿಟ್ಟಿನಲ್ಲಿ, ಫ್ಯಾಷನ್ ಅನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ ಈ ಫೆಸ್ಟಿವಲ್ ನಲ್ಲಿ ಫ್ಯಾಷನ್ ಪರೇಡನ್ನು ಆಯೋಜಿಸಲಿದೆ ಎಂದು ಕಮಾಲಿ ವಿವರಿಸಿದರು. ಈ ಉತ್ಸವದಲ್ಲಿ ಜಗತ್ತಿನೆಲ್ಲೆಡೆಯಿಂದ 35 ಲಕ್ಷಕ್ಕೂ ಹೆಚ್ಚಿನ ಗ್ರಾಹಕರು ಭಾಗವಹಿಸಲಿದ್ದಾರೆ ಎಂಬ ಆಶಯ ಕಮಾಲಿ ವ್ಯಕ್ತಪಡಿಸಿದ್ದಾರೆ.
ಜನವರಿ 28ರಿಂದ ಫೆಬ್ರವರಿ 28ರವರೆಗೆ ಉತ್ಸವ ಬೆಂಗಳೂರ ಗ್ರಾಹಕರ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ. ರಿಯಾಯಿತಿ ದರದಲ್ಲಿ ದೊರೆಯುವ ಬಂಗಾರ ಕೊಳ್ಳಲು ಗ್ರಾಹಕರು ಮುಗಿಬೀಳಲಿದ್ದಾರೆ ಎಂಬುದು ಆಯೋಜಕರ ಅನಿಸಿಕೆ. 6 ಸಾವಿರ ಮಳಿಗೆಗಳಲ್ಲಿ ಶೇ. 60ರಷ್ಟು ಮಳಿಗೆಗಳು ಚಿನ್ನದ ವ್ಯಾಪಾರಕ್ಕೆ ಮೀಸಲಾಗಲಿವೆ. ಇಷ್ಟಲ್ಲದೆ, ಲೆಕ್ಸಸ್ ಲಕ್ಷುರಿ ಕಾರು, ನಿಸ್ಸಾನ್ ಕಾರು ಸೇರಿದಂದೆ ಅನೇಕ ಆಕರ್ಷಕ ಉಡುಗೊರೆಗಳು ಜನರನ್ನು ಸೆಳೆಯಲಿವೆ.












Click it and Unblock the Notifications