'ಕನ್ನಡ ಇನ್ಫೋಮೀಡಿಯಾ' ಮೂಲಕ ಕನ್ನಡ ಕಲಿಕೆ ಆರಂಭಿಸಿ
ಬೆಂಗಳೂರು,
ಜ. 3 : ಸಾಫ್ಟ್ ವೇರ್ ಕಂಪನಿಗಳಿಂದ ವಿವಿಧ ಭಾಷೆಯ ಜನಜಂಗುಳಿಯಿಂದ ಸಿಲಿಕಾನ್ ಸಿಟಿ ಎನಿಸಿರುವ ಬೆಂಗಳೂರಿನಲ್ಲಿ ಕನ್ನಡ ಕಲಿಸುವ ನೂತನ ವೆಬ್ ಸೈಟ್ ವೊಂದನ್ನು ಸೇಂಟ್ ಜೋಸೆಫ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಮುಂದಾಗಿದೆ. id="toptextpromo">ಕನ್ನಡ
ಇನ್ಫೋಮೀಡಿಯಾ ಎಂಬ ಹೆಸರಿನ ವೆಬ್ ಸೈಟ್ ಇದಾಗಿದ್ದು, ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಏಕೈಕ ಉದ್ದೇಶದಿಂದ ಈ ವೆಬ್ ಸೈಟ್ ನ್ನು ಆರಂಭಿಸಲಾಗಿದೆ. ಸಾಫ್ಟ್ ವೇರ್ ಕೇಂದ್ರವಾಗಿರುವ ಬೆಂಗಳೂರಿಗೆ ಉದ್ಯೋಗ ಅರಸಿ ದೇಶದ ವಿವಿಧ ಭಾಗಗಳಿಂದ ಜನರು ಬರುತ್ತಾರೆ. ಸ್ಥಳೀಯ ಭಾಷೆ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಅನೇಕರು ಕನ್ನಡ ಭಾಷೆ ಕಲಿಯಲು ಇಷ್ಟಪಡುತ್ತಾರೆ. ಇಂತಹ ಕನ್ನಡ ಕಲಿಯುವ ಅಭಿಲಾಷೆ ಹೊಂದಿರುವ ಜನರಿಗೆ ಕನ್ನಡ ಇನ್ಫೋಮೀಡಿಯಾ ಸೈಟ್ ಅನುಕೂಲವಾಗಲಿದೆ. id='are-slot-1' class='oiad oi-axt oiadv'> id='top-searched-articles'>ಕಾಲೇಜಿನ
ಪ್ರಾಂಶುಪಾಲ ಅಂಬ್ರೋಸ್ ಫಿಂಟೋ ಅವರ ಸಹಕಾರದ ಮೇರೆಗೆ ಕನ್ನಡ ವಿಭಾಗದ ಮುಖ್ಯಸ್ಥರಾದ ವಿಜಯರಾಘವನ್ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಕನ್ನಡ ಕಲಿಯಲು ಕಾಲೇಜಿಗೆ ಯಾವುದೇ ಶುಲ್ಕವನ್ನು ಕಟ್ಟಿಬೇಕಿಲ್ಲ. ಆಸಕ್ತಿವುಳ್ಳವರು ಕನ್ನಡ ಕಲಿಯಲು ಆರಂಭಿಸಬಹುದು.











Click it and Unblock the Notifications