ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಣುಕ ವಿರುದ್ಧ ನರ್ಸ್ ಜಯಲಕ್ಷ್ಮಿ ಧರಣಿ

By Staff
|
Google Oneindia Kannada News

Jayalakshmi urges CM to drop Renukacharya
ಬೆಂಗಳೂರು, ಡಿ. 31 : ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಅಬಕಾರಿ ಸಚಿವ ಎಂ ಪಿ ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ನರ್ಸ್ ಜಯಲಕ್ಷ್ಮಿ ನಗರದ ಟೌನ್ ಹಾಲ್ ಮುಂದೆ ಧರಣಿ ಆರಂಭಿಸಿದ್ದಾರೆ.

ಮಹಿಳೆಯರ ಬಗ್ಗೆ ಗೌರವವಿಲ್ಲದ ರೇಣುಕಾಚಾರ್ಯ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು. ಈ ಬಗ್ಗೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರಿಗೆ ದೂರು ನೀಡುವುದಾಗಿ ಹೇಳಿದರು. ಸಂಪುಟದಲ್ಲೇ ಅತ್ಯಂತ ಉತ್ತಮ ಕೆಲಸ ಮಾಡಿದ್ದ ಶೋಭಾ ಕರಂದ್ಲಾಜೆ ಅವರಿಂದ ಮಂತ್ರಿ ಪದವಿ ಕಸಿದುಕೊಳ್ಳಲು ರೇಣುಕಾಚಾರ್ಯ ಅವರ ಭಿನ್ನಮತ ಪ್ರಮುಖವಾಗಿ ಕೆಲಸ ಮಾಡಿದೆ. ಇಂತಹ ಮಹಿಳಾ ವಿರೋಧಿ ಸಚಿವರನ್ನು ಕೂಡಲೇ ಕೈಬಿಡುವುದು ಸೂಕ್ತ ಎಂದು ನರ್ಸ್ ಜಯಲಕ್ಷ್ಮಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಬಿಜೆಪಿಯಲ್ಲಿ ಭಿನ್ನಮತ ಚಟುವಟಿಕೆಗೆ ಮುನ್ನುಡಿ ಬರೆದಿದ್ದ ರೇಣುಕಾಚಾರ್ಯ ಅವರು ಬಂಡಾಯದಿಂದಲೇ ಮಂತ್ರಿ ಪದವಿಯನ್ನು ಗಿಟ್ಟಿಸಿಕೊಂಡಿದ್ದರು. ಇದನ್ನು ಪಕ್ಷ ಅನೇಕ ಶಾಸಕರಿಗೆ ಬಹಿರಂಗವಾಗಿ ವಿರೋಧಿಸಿದ್ದರು. ಶಾಸಕ ಅಪ್ಪಚ್ಚು ರಂಜನ್ ಅವರಂತೂ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿ ಕೂಡಲೇ ಅವರಿಂದ ಮಂತ್ರಿ ಪದವಿಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X