ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್ ಫಲಿತಾಂಶ : ಅತಂತ್ರ ವಿಧಾನಸಭೆ

By Staff
|
Google Oneindia Kannada News

Jharkhand polls: State moves towards hung Assembly
ರಾಂಚಿ, ಡಿ. 23 : ಜಾರ್ಖಂಡ್ ನಲ್ಲಿ ನವೆಂಬರ್ 25ರಿಂದ ಡಿಸೆಂಬರ್ 18ರವರೆಗೆ ನಡೆದ ಮತದಾನದ ಫಲಿತಾಂಶ ಹೊರಬೀಳತೊಡಗಿದ್ದು, ಮತ್ತೆ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಗಳು ಕಂಡು ಬಂದಿವೆ. ಇತ್ತೀಚಿನ ವರದಿಗಳು ಬಂದಾಗ ಕಾಂಗ್ರೆಸ್ 25 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, 20 ಸ್ಥಾನಗಳಲ್ಲಿ ಬಿಜೆಪಿ, 14 ಸ್ಥಾನಗಳಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಹಾಗೂ 14ರಲ್ಲಿ ಪಕ್ಷೇತರರು ಮುನ್ನಡೆ ಗಳಿಸಿದ್ದಾರೆ.

ನಿಚ್ಚಳದ ಬಹುಮತ ಯಾರಿಗೂ ದೊರೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೊತೆ ಜೆಎಂಎಂ ಮತ್ತೆ ಕೈಗೂಡಿಸಿ ಸರಕಾರ ರಚಿಸುವ ಲಕ್ಷಣಗಳು ಸ್ಪಷ್ಟವಾಗಿವೆ. ಇದಲ್ಲದೆ, 14 ಮಂದಿ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಗಳಿಸಿದ್ದು, ಸರಕಾರ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ. ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ ಕೂಡಾ 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಜಾತ್ಯತೀತ ಪಕ್ಷಗಳು ಒಗ್ಗೂಡಿ ಸರಕಾರ ರಚನೆ ಮಾಡುವುದು ಖಚಿತವಾಗಿವೆ.

ಜಾರ್ಖಂಡ್ ನ 81 ವಿಧಾನಸಭೆ ಸ್ಥಾನಗಳಿಗೆ 5 ಹಂತಗಳಲ್ಲಿ ಚುನಾವಣೆ ನಡೆಸಲಾಗಿತ್ತು. ಒಟ್ಟು 1,489 ಅಭ್ಯರ್ಥಿಗಳು ಕಣದಲ್ಲಿದ್ದರು. ಮೂಲಗಳ ಪ್ರಕಾರ ಜೆಎಂಎಂ ನಾಯಕ ಶಿಬು ಸೊರೇನ್ ಕಾಂಗ್ರೆಸ್ ಜೊತೆ ಸರಕಾರ ರಚನೆ ಮಾಡಲು ಉತ್ಸುಕರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನ ಯಾರಿಗೆ ಎನ್ನುವುದು ಇಂದು ಸಂಜೆ ವೇಳೆಗೆ ಸ್ಪಷ್ಟವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X