ಡಿ.22: ತೆಲಂಗಾಣದ ಹಣೆಬರಹ ನಿರ್ಧಾರ
ನವದೆಹಲಿ,
ಡಿ. 21 : ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ. ತೆಲಂಗಾಣ ರಾಜ್ಯ ವಿರೋಧಿಸಿ ರಾಯಲಸೀಮಾ ಮತ್ತು ಕರಾವಳಿ ಆಂಧ್ರಪ್ರದೇಶದ ಕಾಂಗ್ರೆಸ್ ಸಂಸದರ ನಿಯೋಗಕ್ಕೆ ಈ ಭರವಸೆ ನೀಡಿದ್ದಾರೆ. id="toptextpromo">ತೆಲಂಗಾಣ
ಪ್ರತ್ಯೇಕ ರಾಜ್ಯಕ್ಕೆ ಕೇಂದ್ರ ಸರಕಾರ ಸಮ್ಮತಿಸಿದ ನಂತರ ಆಗಿರುವ ಎಲ್ಲ ಬೆಳವಣಿಗೆಯನ್ನು ಸರಕಾರ ಕೂಲಂಕಷವಾಗಿ ಪರಿಶೀಲನೆ ನಡೆಸಿದೆ. ರಾಯಲುಸೀಮಾ ಮತ್ತು ಕರಾವಳಿ ಆಂಧ್ರಪ್ರದೇಶದ ಜನರ ವಿರೋದ ಕೂಡಾ ಗಮನಿಸಲಾಗುತ್ತದೆ. ಮಂಗಳವಾರ ಸಂಪುಟದ ಹಿರಿಯ ಸಹದ್ಯೋಗಿಗಲೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಸಿಂಗ್ ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>ಪ್ರಧಾನಮಂತ್ರಿ
ಬೇಟಿ ಮಾಡಲು ತೆರಳಿದ ಸಂಸದರ ನಿಯೋಗವು, ಆಂಧ್ರಪ್ರದೇಶದಲ್ಲಿ ಆಗುತ್ತಿರುವ ನಿತ್ಯದ ಬೆಳವಣಿಗೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಪ್ರತಿಭಟನೆ, ಉಪವಾಸ ಸತ್ಯಾಗ್ರಹಗಳು ನಡೆಯುತ್ತಲೇ ಇವೆ. ಪಕ್ಷಬೇದ ಮರೆತ ಶಾಸಕರು, ಸಂಸದರು ತೆಲಂಗಾಣ ರಾಜ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯದ ರಚನೆಯನ್ನು ಕೈಬಿಡಬೇಕು ಎಂದು ನಿಯೋಗ ಒತ್ತಾಯಿಸಿದೆ. ನಿಯೋಗದಲ್ಲಿ ಕಾಂಗ್ರೆಸ್ ಸಂಸದರು ಹಾಗೂ ಕೇಂದ್ರಮಂತ್ರಿಗಳಾದ ಪಣಬಕ್ ಲಕ್ಷ್ಮಿ ಮತ್ತು ಸುಬ್ರಮಣಿ ರೆಡ್ಡಿ ಇರುವುದು ವಿಶೇಷವಾಗಿದೆ.











Click it and Unblock the Notifications