ಮರಳು ಲಾರಿ ಮುಷ್ಕರ ಅಂತ್ಯ: ಅಶೋಕ್

R Ashok
ಬೆಂಗಳೂರು,ಡಿ. 18: ಸಾರಿಗೆ ಸಚಿವ ಆರ್.ಅಶೋಕ್, ಮರಳು ಲಾರಿ ಮಾಲೀಕರೊಂದಿಗೆ ಗುರುವಾರ ನಡೆಸಿದ ಸಂಧಾನ ಫಲಪ್ರದಗೊಂಡಿದೆ. ಶುಕ್ರವಾರದಿಂದ ಎಂದಿನಂತೆ ಮರಳು ಸಾಗಣೆ ಆರಂಭಗೊಳ್ಳಲಿದೆ. ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಹತ್ತು ದಿನಗಳಿಂದ ಲಾರಿ ಮಾಲೀಕರು ಮುಷ್ಕರ ನಡೆಸುತ್ತಿದ್ದರು. ಲಾರಿ ಮಾಲೀಕರ ಎರಡುಸಂಘಟನೆಗಳೊಂದಿಗೆ ಅಶೋಕ್ ಪ್ರತ್ಯೇಕ ಮಾತುಕತೆ ನಡೆಸಿದರು.

ಅಶೋಕ್ ನಡೆಸಿದ ಸಂಧಾನ ಸಭೆಯ ಸಂಕ್ಷಿಪ್ತ ವಿವರ:

*ಹೈಕೋರ್ಟ್ ತಡೆಯಾಜ್ಞೆ ಇರುವಲ್ಲಿ ಬಿಟ್ಟು ಉಳಿದ ಕಡೆ ಮರಳು ತೆಗೆಯು ವುದಕ್ಕೆ ಟೆಂಡರ್ ಮೂಲಕ ಪರವಾನಗಿ ನೀಡಲಾಗುವುದು.
* ಅಕ್ರಮ ಮರಳು ಗಣಿಗಾರಿಕೆ ಹಾಗೂ ಫಿಲ್ಟರ್ ಮರಳು ತೆಗೆಯುವುದನ್ನು ನಿಲ್ಲಿಸುವ ಸಂಬಂಧ ಕಾರ್ಯಪಡೆ ರಚಿಸಲಾಗುವುದು.
* ಕಾರ್ಯಪಡೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ, ಪರಿಸರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಇರಲಿದ್ದಾರೆ
* ತಮಿಳುನಾಡು ಮಾದರಿಯಲ್ಲಿ ಮರಳು ನೀತಿ ,ಮುಂದಿನ ಬಜೆಟ್ ಒಳಗೆ ಹೊಸ ನೀತಿ ಜಾರಿಗೆ ತರಲಾಗುವುದು.
* ಮರಳು ಸಾಗಣೆ ಲಾರಿಗಳನ್ನು ಗುರುತಿಸಲು ಪ್ರತ್ಯೇಕ ಬಣ್ಣ ಬಳಿಯುವಂತೆ ಸೂಚಿಸಲಾಗಿದೆ.
* ಪರಿಸರಕ್ಕೆ ಧಕ್ಕೆ ಬಾರದಂತೆ ಮೂರು ಅಡಿ ಗಿಂತ ಹೆಚ್ಚಿನ ಆಳಕ್ಕೆ ಮರಳು ತೆಗೆಯಬಾರದು . ಪ್ರತಿ ಲಾರಿಗೆ ಮಾಸಿಕ ಕನಿಷ್ಠ 15 ಪರ್ಮಿಟ್ ಪಡೆದುಕೊಳ್ಳಲೇಬೇಕು.
*ಇನ್ನು ಮುಂದೆ ಮರಳು ಲಾರಿಗಳ ಮೇಲೆ ಪೊಲೀಸರು ಕೇಸು ದಾಖಲಿಸುವುದಿಲ್ಲ. ಆದರೆ, ರಸ್ತೆಯುದ್ದಕ್ಕೂ ಮರಳು ಚೆಲ್ಲದಂತೆ ಹಾಗೂ ವಾಹನ ಸವಾರರಿಗೆ ಅಡಚಣೆಯಾಗದಂತೆ ಮೇಲೆ ಟಾರ್ಪಲಿನ್ ಮುಚ್ಚಿ ಸಾಗಣೆ ಮಾಡಬೇಕು
*ಬೆಂಗಳೂರಿನಲ್ಲಿ ಲಾರಿಗಳಿಗೆ ಸೂಕ್ತ ನಿಲುಗಡೆ ತಾಣ ಬೇಕಾಗಿದೆ.ರಿಂಗ್ ರಸ್ತೆಯಲ್ಲಿ ಜಾಗ ನೀಡುವಂತೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಬೇಡಿಕೆ.

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+