ಹುಮ್ನಾಬಾದ್ ಚರ್ಚ್ ದಾಳಿ: ಪಾದ್ರಿ ಪಿತೂರಿ
ಹುಮನಾಬಾದ್,
ಡಿ. 18: ಇಲ್ಲಿನ ಟೀಚರ್ಸ್ ಕಾಲೋನಿಯ ಬೀರ್ ಶೆಬಾ ಚರ್ಚ್ ಮೇಲೆ ಕಳೆದ ತಿಂಗಳು ನಡೆದ ದಾಳಿಗೆ ಚರ್ಚ್ ನ ಮಾಜಿ ಪಾದ್ರಿ ಕಾರಣ ಎಂದು ತಿಳಿದುಬಂದಿದೆ. ಸಂಚು ಹೆಣೆದಿದ್ದ ಪಾದ್ರಿ ವಸಂತ ದೇವಿಂದ್ರ ಸೇರಿದಂತೆ ನಾಲ್ವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. id="toptextpromo">ಬೀರ್‌ಶೆಬಾ
ಚರ್ಚ್ ಪಾಸ್ಟರ್ ಆಗಿದ್ದ ವಸಂತ ಅವರನ್ನು 2009ರ ಜೂನ್ 20 ರಂದು ಗುಲ್ಬರ್ಗಾದ ಚಿಂಚೋಳಿ ತಾಲೂಕಿನ ಬಸಂತ ಪೂರ್‌ಗೆ ವರ್ಗಾಯಿಸಲಾಗಿತ್ತು. ವಸಂತ ಮರಳಿ ಇಲ್ಲಿಗೆ ಬರುವ ಇರಾದೆಯಿಂದ ಚರ್ಚ್‌ನ್ನು ಹಾನಿಗೊಳಿಸಿದರೆ ತಮಗೆ ಮತ್ತೇ ವರ್ಗ ಮಾಡಬಹುದೆಂಬ ದುರುದ್ದೇಶದಿಂದ ಪಾದ್ರಿ ಸಂಚು ರೂಪಿಸಿದ್ದನು. id='are-slot-1' class='oiad oi-axt oiadv'> id='top-searched-articles'>ಚರ್ಚ್‌ಗಳ
ಮೇಲೆ ದಾಳಿ ನಡೆಸಿ ಸಂಘಪರಿವಾರದ ಮೇಲೆ ಗೂಬೆ ಕೂರಿಸುವುದು ಸುಲಭ ಎಂದು ಭಾವಿಸಿದ ಪಾದ್ರಿ , ಸುನೀಲ್ ಮತ್ತು ದೀಪಕ್‌ಗೆ ಚರ್ಚ್ ಹಾನಿಗೊಳಿಸಲು 10 ಸಾವಿರ ರೂ. ಕೊಡುವುದಾಗಿ ವಾಗ್ದಾನ ಮಾಡಿ ಮುಂಗಡವಾಗಿ 1ಸಾವಿರ ರೂ. ನೀಡಿದ್ದ ಎನ್ನಲಾಗಿದೆ. ವಸಂತ ರೂಪಿಸಿದ ಷಡ್ಯಂತ್ರದಿಂದ ಸ್ಥಳೀಯ ನಿವಾಸಿಗಳಾದ ಸುನೀಲ ಬಾಬುರಾವ, ಮಲ್ಲು ಅಲಿಯಾಸ್ ಮಲ್ಲಿಕಾರ್ಜುನ ಶರಣಯ್ಯಾ ಸ್ವಾಮಿ, ಮಂಜಾ ಅಲಿ ಯಾಸ್ ಮಂಜುನಾಥ ಶಂಭುಶಂಕರ ಜೈಲಿಗೆ ಹೋಗುವಂತಾಗಿದೆ.











Click it and Unblock the Notifications