ಸರ್ಕಾರ ಬೀಳಿಸೋ ಕೆಲ್ಸ ಕಾಂಗ್ರೆಸ್ ಗೆ : ಗೌಡ

HD Devegowda
ಬೆಂಗಳೂರು, ಡಿ. 17: ಸರ್ಕಾರ ಉರುಳಿಸೋ ಕೆಲಸದಲ್ಲಿ ನಾವು ನಿರತರಾಗಿಲ್ಲ. ಸತ್ವವಿಲ್ಲದಿದ್ದರೆ ತಾನೇ ಉದುರುತ್ತೆ. ಅಥವಾ ಕಾಂಗ್ರೆಸ್ ನಿಂದ ಉರುಳಿದರೂ ಸರಿಯೇ. ಕಾಂಗ್ರೆಸ್ ಜೆಡಿಎಸ್ ನಿಂದ ಯಾರೇ ಮುಖ್ಯಮಂತ್ರಿಯಾದರೂ ತಮ್ಮ ಬೆಂಬಲವಿದೆ ಎಂದು ಎಚ್ ಡಿ ದೇವೇಗೌಡ ಹೇಳಿದ್ದಾರೆ.

ತಮ್ಮ ಹಿರಿಮಗ ಎಚ್ ಡಿ ರೇವಣ್ಣ ಅವರ 53ನೇ ಹುಟ್ಟುಹಬ್ಬದ ಆಚರಣೆ ನಂತರ ಗೌಡರು ಮಾತನಾಡುತ್ತಾ, ಬಿಜೆಪಿ ಪತನ ಸನ್ನಿಹಿತವಾಗುತ್ತಿದೆ. ಭಿನ್ನಮತೀಯ ಬೇಡಿಕೆ ಈಡೇರದಿದ್ದರೆ ಸರ್ಕಾರ ಪತನವಾಗುವುದು ಖಾತ್ರಿ. ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ಉತ್ತಮ ಫಲಿತಾಂಶ ದೊರೆಯಲಿದೆ ಎಂಬ ಆಶಾಭಾವವನ್ನು ದೇವೇಗೌಡ ವ್ಯಕ್ತಪಡಿಸಿದರು.

ಬುಧವಾರ ತಮ್ಮ 51 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕುಮಾರಸ್ವಾಮಿ ಅವರು ಕೇಕ್ ಕತ್ತರಿಸಿ ಮಾತನಾಡುತ್ತಾ " ಸದ್ಯದಲ್ಲೇ ಕರ್ನಾಟಕ ಜನತೆಗೆ ಒಳ್ಳೆಯದಾಗುವ ಸಿಹಿಸುದ್ದಿ ಹೊರಬೀಳಲಿದೆ" ಎಂದು ಹೇಳಿದ್ದರು .ಆದರೆ, ವಿವರಗಳನ್ನು ಬಹಿರಂಗ ಪಡಿಸಿರಲಿಲ್ಲ. ಆ ಸಿಹಿಸುದ್ದಿ ಏನಿರಬಹುದು? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+