ಬೆಂಗಳೂರು ಸ್ಫೋಟ ಪ್ರಕರಣ; ಐವರ ಬಂಧನ

ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ನಜೀರ್ ಹಾಗೂ ಸಫಾಜ್ ನನ್ನು ಮೇಘಾಲಯ ಪೊಲೀಸರಿಂದ ಬೆಂಗಳೂರು ನಗರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳಾದ ಅಬ್ದುಲ್ ಸತ್ತಾರ್, ಅಬ್ದುಲ್ ಜಬ್ಬರ್, ಮುಜೀಬ್, ಫೈಜಲ್ ಅಬ್ದುಲ್ ಜಲೀಲ್, ಮುನಾಫ್ ಸರ್ಪುದ್ದೀನ್, ಸಕಾರಿಯಾ ಹಾಗೂ ಸರ್ಫರಾಜ್ ನವಾಬ್ ಅವರನ್ನು ಬಂಧಿಸಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಬೆಂಗಳೂರು ಸ್ಫೋಟದ ನಂತರ ಪಾಕಿಸ್ತಾನಕ್ಕೆ ನುಗ್ಗಲು ಯತ್ನಿಸಿದ ಆರೋಪಿಗಳಾದ ಅಬ್ದುಲ್ ರಹೀಂ, ಮೊಹಮ್ಮದ್ ಫಯಾಜ್, ಫಯಾಜ್ ಮೊಹಮ್ಮದ್ ಯಾಸಿನ್ ಅವರನ್ನು ಜಮ್ಮು ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನೆ ಗುಂಡು ಹಾರಿಸಿ ಕೊಂದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications