ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಸ್‌ಐಎಲ್ ಚಿಟ್‌ ಫಂಡ್ ಶಾಖೆ ವಿಸ್ತರಣೆ

By Staff
|
Google Oneindia Kannada News

MSIL Building
ಬೆಂಗಳೂರು, ಡಿ. 15: ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್)ನ ಚಿಟ್‌ಫಂಡ್ ಶಾಖೆಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತೆರೆಯಲು ಉದ್ದೇಶಿಸಲಾಗಿದೆ ಎಂದು ಎಂಎಸ್‌ಐಎಲ್ ಅಧ್ಯಕ್ಷ ಡಾ. ವಿಕ್ರಮ ವಿ. ಪಾಟೀಲ ಅವರು ತಿಳಿಸಿದರು.

ಅವರು ಎಂಎಸ್‌ಐಎಲ್ ಚಿಟ್‌ಫಂಡ್‌ನ ನಾಲ್ಕು ನೂತನ ಶಾಖೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗ್ರಾಹಕರ ಪರ ಕಾಳಜಿಯಿಂದ ಎಂಎಸ್‌ಐಎಲ್ ಚಿಟ್‌ಫಂಡ್ ಸಂಸ್ಥೆ 2005ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಹೂಡಿಕೆದಾರರಿದ್ದರೂ ಶಾಖೆಗಳಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಎಂಎಸ್‌ಐಎಲ್ ಚಿಟ್‌ಫಂಡ್ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು.

ಎಂಎಸ್‌ಐಎಲ್ ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆಯಾಗಿದ್ದು, ಖಾಸಗಿ ವಲಯದೊಂದಿಗೆ ಸ್ಪರ್ಧಿಸಬೇಕಾಗಿದೆ. ಇದಕ್ಕಾಗಿ ತನ್ನ ಕಾರ್ಯಶೈಲಿಯನ್ನು ಬದಲಿಸಿಕೊಳ್ಳುತ್ತಿರುವುದು ಅತ್ಯುತ್ತಮ ಬೆಳವಣಿಗೆ ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಶಿವರಾಂ ಅವರು ಮಾತನಾಡಿ, ಗ್ರಾಹಕರ ಹಣವನ್ನು ಸುರಕ್ಷಿತ ಹೂಡಿಕೆಯಲ್ಲಿ ತೊಡಗಿಸಿಕೊಳ್ಳಲು ಎಂಎಸ್‌ಐಎಲ್ ಚಿಟ್‌ಫಂಡ್ ಸೂಕ್ತ ಆಯ್ಕೆ ಎಂದು ತಿಳಿಸಿದರು. ಎಂಎಸ್‌ಐಎಲ್ ಚಿಟ್‌ಫಂಡ್ ಈ ವರ್ಷ ರೂ.60 ಕೋಟಿ ವ್ಯವಹಾರ ನಡೆಸಿದ್ದು, ಮುಂದಿನ ದಿನಗಳಲ್ಲಿ ಇದನ್ನು ಸಾವಿರ ಕೋಟಿಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ.

ಕೇರಳ ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಚಿಟ್ ಫಂಡ್ ರೂ. 2000 ಕೋಟಿ ವ್ಯವಹಾರ ನಡೆಸಿದ್ದು, ಇದೇ ಮಾದರಿಯಲ್ಲಿ ಎಂಎಸ್‌ಐಎಲ್ ಚಿಟ್‌ಫಂಡನ್ನು ವಿಸ್ತರಿಸಲು ಯೋಜಿಸಲಾಗಿದೆ. ಚೀಟಿ ವ್ಯವಹಾರದಲ್ಲಿ ಹಣ ಕಳೆದುಕೊಂಡು ಮೋಸಹೋಗುವ ಜನರ ರಕ್ಷಣೆಗಾಗಿಯೇ ಈ ಯೋಜನೆಯನ್ನು ರೂಪಿಸಲಾಗಿದೆ. ಎಂಎಸ್‌ಐಎಲ್ ಚಿಟ್‌ಫಂಡ್ ತನ್ನ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯಿಂದಾಗಿ ಜನಪ್ರಿಯವಾಗಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಎಂಎಸ್‌ಐಎಲ್ ಚಿಟ್‌ಫಂಡ್‌ನ 11 ಶಾಖೆಗಳಿದ್ದು, ಇಂದು ರಾಜಾಜಿನಗರ, ರಾಮಮೂರ್ತಿನಗರ, ಚಾಮರಾಜಪೇಟೆ ಹಾಗೂ ಬನಶಂಕರಿಯಲ್ಲಿ ನಾಲ್ಕು ಹೊಸ ಶಾಖೆಗಳನ್ನು ತೆರೆಯಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X