ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹದಾಯಿ ನ್ಯಾಯಾಧಿಕರಣ; ಮೊಯ್ಲಿ ಸಮರ್ಥನೆ

By Staff
|
Google Oneindia Kannada News

Moily criticises government’s stand on Mahadayi
ಬೆಂಗಳೂರು, ಡಿ. 13 : ಮಹದಾಯಿ ಯೋಜನೆ ಪರಿಹಾರಕ್ಕೆ ನ್ಯಾಯಾಧೀಕರಣ ರಚನೆಗೆ ವಿರೋಧಿಸಿರುವ ರಾಜ್ಯ ಸರಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ, ಕೇಂದ್ರ ಯಾವುದೇ ಒತ್ತಡಕ್ಕೆ ಮಣಿದು ನ್ಯಾಯಾಧೀಕರಣ ರಚನೆ ಮಾಡಿಲ್ಲ ಎಂದು ಸಮರ್ಥಸಿಕೊಂಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಯಾವುದೇ ವಿಚಾರದಲ್ಲಿ ಮಾತನಾಡುವ ಮುನ್ನ ಲಕ್ಷ್ಮಣರೇಖೆ ಹಾಕಿಕೊಂಡು ಮಾತನಾಡಬೇಕು ಎಂದು ತಾಕೀತು ಮಾಡಿದ್ದಾರೆ. ನ್ಯಾಯಾಧೀಕರಣ ವಿರೋಧಿಸುವ ಮೂಲಕ ತನ್ನ ಕಡೆ ನ್ಯಾಯವಿಲ್ಲ ಎಂಬ ದೌರ್ಬಲ್ಯವನ್ನು ತಾನೇ ಒಪ್ಪಿಕೊಂಡಂತೆ ಆಗುತ್ತದೆ ಎಂಬುದನ್ನು ರಾಜ್ಯ ಸರಕಾರ ಅರಿತುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹದಾಯಿ ನ್ಯಾಯಾಧೀಕರಣ ರಚನೆ ಮಾಡುವ ಕೇಂದ್ರ ಸರಕಾರದ ಕ್ರಮ ರಾಜ್ಯಕ್ಕೆ ಅನ್ಯಾಯವಾಗುವ ಆತುರದ ನಿರ್ಧಾರದ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಗೋವಾ ಸರಕಾರದ ಒತ್ತಡಕ್ಕೆ ಮಣಿದು ಕೇಂದ್ರ ಈ ನಿರ್ಧಾರ ಕೈಗೊಂಡಿದೆ ಎಂದು ಆರೋಪ ಮಾಡಿದ್ದರು. ಸುಪ್ರಿಂಕೋರ್ಟ್ ನಲ್ಲಿ ಮಹಾದಾಯಿ ಯೋಜನೆ ಕುರಿತು ಪ್ರಕರಣದ ವಿಚಾರಣೆ ನಡೆಯುತ್ತಿದೆ. ತೀರ್ಪು ಹೊರಬರುವ ಮುನ್ನವೇ ನ್ಯಾಯಾಧೀಕರಣ ರಚಿಸಿರುವುದು ಕಾನೂನು ಬಾಹಿರ ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X