ಎಂಇಎಸ್ ಕುತಂತ್ರ, ಹೊಸ ರಾಜ್ಯಕ್ಕೆ ಆಗ್ರಹ

ಎಂಇಎಸ್ ನ ಒಂದು ಗುಂಪಿನ ಅಧ್ಯಕ್ಷ ಟಿ ಕೆ ಪಾಟೀಲ್, ತೆಲಂಗಾಣ ಮಾದರಿಯಲ್ಲೇ ಮರಾಠಿ ಭಾಷಿಗರೆಲ್ಲ ಒಗ್ಗೂಡಿ, ಶಕ್ತಿ ಪ್ರದರ್ಶಿಸಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಬೇಕು. ಇದಕ್ಕೆ ಮಹಾರಾಷ್ಟ್ರದ ನಾಯಕರುಗಳು ಬೆಂಬಲ ನೀಡಬೇಕು. ಈ ಮೂಲಕ ಕರ್ನಾಟಕದ ಕಪಿ ಮುಷ್ಠಿಯಿಂದ ಮರಾಠಿಗರನ್ನು ಬಿಡುಗಡೆ ಮಾಡಿಸಬೇಕೆಂದು ಪಾಟೀಲ್ ಕರೆ ನೀಡಿದ್ದಾರೆ.
ಅತ್ತ ಆಂಧ್ರಪ್ರದೇಶದಲ್ಲಿ ಕರ್ನಾಟಕದ ಬಳ್ಳಾರಿ, ಕಡಪ, ಕರ್ನೂಲ್, ಚಿತ್ತೂರು, ಅನಂತಪುರಂ, ನೆಲ್ಲೂರು ಮತ್ತು ಪ್ರಕಾಶಂ ಜಿಲ್ಲೆಗಳನ್ನು ಗ್ರೇಟರ್ ರಾಯಲ್ ಸೀಮಾದಲ್ಲಿ ಸೇರ್ಪಡೆಗೊಳಿಸಬೇಕು. ಇದಕ್ಕಾಗಿ ಸೋನಿಯಾ ಅವರ ಮನೆ ಮುಂದೆ ಧರಣಿ ನಡೆಸುವುದಾಗಿ ರಾಯಲ್ ಸೀಮಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕುಂಚುಂ ವೆಂಕಟಸುಬ್ಬಾರೆಡ್ಡಿ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications