10 ಗ್ರಾಂ ಚಿನ್ನಕ್ಕೆ 17,360 ಮಾತ್ರ
ನವದೆಹಲಿ,
ಡಿ. 10 : ಬಂಗಾರ ಕೊಳ್ಳಬೇಕು ಎನ್ನುವವರಿಗೊಂದು ಸಹಿಸುದ್ದಿ ಚಿನಿವಾರ ಮಾರುಕಟ್ಟೆಯಿಂದ ಬಂದಿದೆ. ಚಿನ್ನದ ಬೆಲೆ ಮತ್ತೊಮ್ಮೆ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಬುಧವಾರದ ವಹಿವಾಟಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 440 ರುಪಾಯಿಯಷ್ಟು ಕಡಿಮೆಯಾಗಿದ್ದು, ಇದು ಈ ವರ್ಷದ ಎರಡನೇ ಅತಿದೊಡ್ಡ ಕುಸಿತವಾಗಿದೆ. ಕಳೆದ ಶನಿವಾರ 510 ರಷ್ಟು ಚಿನ್ನದ ಬೆಲೆ ಕುಸಿದಿತ್ತು. id="toptextpromo">ಚಿನ್ನದ
ಬೆಲೆ 18 ಸಾವಿರ ಗಡಿ ದಾಟಿದ ನಂತರ ತೀವ್ರಗತಿಯಲ್ಲಿ ಕುಸಿತ ದಾಖಲು ಆರಂಭಿಸಿದೆ. ಕಳೆದ ಐದು ದಿನಗಳ ವಹಿವಾಟಿನಲ್ಲಿ ಒಟ್ಟಾರೆಯಾಗಿ 1,260 ರುಪಾಯಿ ಕಡಿಮೆಯಾಗಿದೆ. ಡಿಸೆಂಬರ್ 3 ರಂದು ಚಿನ್ನದ ಬೆಲೆ ಗರಿಷ್ಟ ಮಟ್ಟವಾದ 18,550 ರುಪಾಯಿ ತಲುಪಿತ್ತು. ಬುಧವಾರದ ವಹಿವಾಟಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ಶೇ. 2.47 ರಷ್ಟು ಕುಸಿತ ಕಂಡು 17,360 ರುಪಾಯಿಗೆ ಬಂದು ನಿಂತಿದೆ. ವಿಶ್ವ ಮಾರುಕಟ್ಟೆ ಬೇಡಿಕೆ ಕುಸಿತ ಕಂಡಿರುವುದರಿಂದ ಚಿನ್ನದ ಸಂಗ್ರಹಕಾರರು ಮಾರಾಟಕ್ಕೆ ಇಳಿದಿದ್ದಾರೆ ಎಂದು ಚಿನಿವಾರ ಪೇಟೆ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications