ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಕೇಂದ್ರ ಅಸ್ತು

By Staff
|
Google Oneindia Kannada News

Center nods for Telangana; KCR breaks fast
ನವದೆಹಲಿ, ಡಿ. 10 : ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಕೇಂದ್ರ ಸರಕಾರ ಅಸ್ತು ಎಂದಿದ್ದು, ನೂತನ ರಾಜ್ಯ ರೂಪಿಸುವ ಪ್ರಕ್ರಿಯೆಯನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಪಿ ಚಿದಂಬರಂ ಬುಧವಾರ ತಡರಾತ್ರಿ ಪ್ರಕಟಿಸಿದರು. ಈ ಉದ್ದೇಶಕ್ಕೆ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಸೂಕ್ತ ನಿರ್ಣಯವೊಂದನ್ನು ಮಂಡಿಸಲಾಗುವುದು ಎಂದು ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆದ ಉನ್ನತ ಮಟ್ಟದ ಕಾಂಗ್ರೆಸ್ ನಾಯಕರ ಎರಡು ಸುತ್ತಿನ ಮಾತುಕತೆ ಬಳಿಕ ತಿಳಿಸಿದರು.

ಪ್ರತ್ಯೇಕ ತೆಲಂಗಾಣ ಚಳವಳಿಗೆ ಸಂಬಂಧಿಸಿದ್ದ ನಾಯಕರು, ವಿದ್ಯಾರ್ಥಿಗಳು ಮತ್ತು ಇತರರ ವಿರುದ್ಧ ಹೂಡಲಾದ ಎಲ್ಲ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಆಂಧ್ರಪ್ರದೇಶ ಮುಖ್ಯಮಂತ್ರಿ ರೋಸಯ್ಯ ಅವರಿಗೆ ಮನವಿ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ತಾನು ಅಗತ್ಯ ಕ್ರಮಕೈಗೊಳ್ಳುವುದಾಗಿ ಸಿಎಂ ರೋಸಯ್ಯ ಕೇಂದ್ರಕ್ಕೆ ಭರವಸೆ ನೀಡಿದ್ದಾರೆ.

ಚಂದ್ರಶೇಖರರಾವ್ ಅವರ ಆರೋಗ್ಯದ ಬಗ್ಗೆ ನಮಗೆ ಕಳವಳವಿದೆ. ಉಪವಾಸವನ್ನು ತಕ್ಷಣ ನಿಲ್ಲಿಸುವಂತೆ ನಾವು ಮನವಿ ಮಾಡುತ್ತೇವೆ. ಸಾಮಾನ್ಯ ಸ್ಥಿತಿ ಸ್ಥಾಪನೆಗೆ ನೆರವಾಗಲು ತಮ್ಮ ಚಳವಳಿ ಹಿಂತೆಗೆದುಕೊಳ್ಳುವಂತೆ ನಾವು ಎಲ್ಲ ವಿದ್ಯಾರ್ಥಿಗಳಿಗೆ ಕೂಡ ಮನವಿ ಮಾಡಿಕೊಳ್ಳುತ್ತೇವೆ ಎಂದು ಚಿದಂಬರಂ ಹೇಳಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X