ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿ ಸವಿಯಲು ದೇವವೃಂದಕ್ಕೆ ಬನ್ನಿ

By Staff
|
Google Oneindia Kannada News

Devavrunda Kshetra, Mudigere
ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ದೇವವೃಂದ ಗ್ರಾಮದಿಂದ ಕಳೆದ 2 ವರ್ಷಗಳಿಂದ "ಕೃಷಿಕ" ಹೆಸರಿಗೆ ದ್ವೈಮಾಸಿಕ ಪತ್ರಿಕೆಯು ಹೊರಬರುತ್ತಿದೆ. ಮಿತ್ರರಾದ ದಿನೇಶ್ ಮತ್ತು ಜಯರಾಂರವರುಗಳು ಇದರ ರೂವಾರಿಗಳು. ಇದೇ ಪ್ರಥಮ ಬಾರಿಗೆ ಕಾಫಿ ಬೆಳೆಯುವ ಪ್ರದೇಶವಾದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಕಾಫಿ ಬೆಳೆಗಾರರಿಗೆ "ಉತ್ತಮ ಕೃಷಿಕ" ಪ್ರಶಸ್ತಿಯನ್ನು ಡಿಸೆಂಬರ್ 27-12-2009 ರಂದು ದೇವವೃಂದದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುವುದು.

ಹಳ್ಳಿ ಹಬ್ಬ ಹೆಸರಿನ ಈ ಕಾರ್ಯಕ್ರಮಕ್ಕೆ ನಿಮಗೆ ಇದೋ ಹಾರ್ದಿಕ ಸ್ವಾಗತ. ಪ್ರವೇಶ ಶುಲ್ಕ ರೂ. 100-00 ಮಾತ್ರ. ಕಾಫಿ ಮತ್ತು ಇತರೆ ಬೆಳೆಗಳ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ, ಹಳ್ಳಿ ಊಟ ಲಭ್ಯ. ಜೊತೆಗೆ ರಿಚರ್ಡ್ ಲೂಯಿಸ್, ಮೈಸೂರು ಆನಂದ್, ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮವಿದೆ. ಕಾರ್ಯಕ್ರಮದಲ್ಲಿ ಟಿ.ಎನ್. ಸೀತಾರಾಮ್ ಭಾಗವಹಿಸಲಿದ್ದಾರೆ.

ದೇವವೃಂದದಂತಹ ಅಪ್ಪಟ ಮಲೆನಾಡಿನ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಪ್ರಾಯೋಜಕರಿಗೆ ಆಹ್ವಾನವಿದೆ. ಕಾರ್ಯಕ್ರಮಕ್ಕೆ ಬನ್ನಿ, ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಯಿಸಿ. ಕಾರ್ಯಕ್ರಮವು ಭಾನುವಾರ ನಡೆಯುತ್ತದೆ. ಮಾರನೇ ದಿನ ಸೋಮವಾರ ಮೊಹರಂ ಕಡೇದಿನ ರಜಾ ಇದೆ. ಪಕ್ಕದಲ್ಲಿಯೇ ಇತಿಹಾಸ ಪ್ರಸಿದ್ಧ ದೇವವೃಂದ ದೇವಸ್ಥಾನ, ಹತ್ತಿರದಲ್ಲಿಯೇ ಹೊರನಾಡು, ಧರ್ಮಸ್ಥಳ ಇದೆ. ಬಿಡುವು ಮಾಡಿಕೊಂಡು ಬನ್ನಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜಯರಾಂ ದೇವವೃಂದ, ಸಂಪಾದಕರು, ಕೃಷಿಕ 9448918687 ಅಥವಾ ದಿನೇಶ್, ಪ್ರಕಾಶಕರು, ಕೃಷಿಕ 9242253960 , email: [email protected] ನ್ನು ಸಂಪರ್ಕಿಸಿ.

ಲೇಖಕ:ಕೆ.ಎಸ್. ರಮೇಶ್ ಭಾರದ್ವಾಜ್
9448210818, 9242817684
[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X