ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ ಆರ್ ಟಿಸಿ ದೇಶದಲ್ಲಿ ನಂ.1

By Staff
|
Google Oneindia Kannada News

ನವದೆಹಲಿ, ಡಿ.6: ಚಾಲಕರ ನೇಮಕಕ್ಕೆ ಜಾಲ ಆಧಾರಿತ (ವೆಬ್ ಬೇಸ್ಡ್) ಪಾರದರ್ಶಕ ವ್ಯವಸ್ಥೆ ಜಾರಿ ಮಾಡಿದ್ದಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕೇಂದ್ರ ಸರಕಾರದ ಪ್ರಶಸ್ತಿ ಲಭಿಸಿದೆ. ಚಾಲಕರ ನೇಮಕಕ್ಕೆ ಕೆಎಸ್‌ಆರ್‌ಟಿಸಿ ಪಾರದರ್ಶಕ ವ್ಯವಸ್ಥೆಯನ್ನು ಜಾರಿ ಮಾಡಿತ್ತು.

ಈವರೆಗೆ 20,000 ಚಾಲಕರನ್ನು ನೇಮಕ ಮಾಡಲಾಗಿದೆ. ಚಾಲಕರ ಆಯ್ಕೆಗೆ 8 ಹಾಗೂ ಇಂಗ್ಲಿಷ್‌ನ ಎಸ್ ಆಕಾರದ ಟ್ರಾಕ್ ನಿರ್ಮಿಸಲಾಗಿದೆ. ನೇಮಕದಲ್ಲಿ ಯಾವುದೇ ಆರೋಪ ಬಂದಿಲ್ಲ. ಈ ವ್ಯವಸ್ಥೆಯನ್ನು ಮೊದಲಿಗೆ ಹಾಗೂ ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕಾಗಿ ಪ್ರಶಸ್ತಿ ನೀಡಲಾಗಿದೆ.
ಶನಿವಾರ ಹೊಸದಿಲ್ಲಿಯಲ್ಲಿ ನಡೆದ ಸಮಾರಂಭ ದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ,ರಾಜ್ಯ ಸಾರಿಗೆ ಸಚಿವ ಆರ್. ಅಶೋಕ್‌ಗೆ ಪ್ರಶಸ್ತಿ ಹಸ್ತಾಂತರಿಸಿ, ಕರ್ನಾಟಕ ಉತ್ತಮ ಕೆಲಸ ಮಾಡಿದ್ದು, ಇತರರಿಗೆ ಮಾದರಿಯಾಗಿದೆ'ಎಂದರು.

ಸಚಿವ ಆರ್.ಅಶೋಕ್ ಮಾತನಾಡಿ, ಇದು ರಾಜ್ಯ, ಸಾರಿಗೆ ಅಧಿಕಾರಿಗಳು ಮತ್ತು ನೌಕರರಿಗೆ ಸಂದ ಪ್ರಶಸ್ತಿ. ಇದಕ್ಕೆ ಕಾರಣರಾದವರಿಗೆ ಅಭಿನಂದಿಸುತ್ತೇನೆ ಎಂದರು.ರಾಜ್ಯದಲ್ಲಿ ನಿಲುಗಡೆ ವ್ಯವಸ್ಥೆ ಹಾಗೂ ಜಾಹೀರಾತು ಮೂಲಕ, ಆದಾಯ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸಲು ಮಹಾನಗರ ಸಾರಿಗೆ ಪ್ರಾಧಿಕಾರವನ್ನು ರಚಿಸಲಾಗಿದೆ. ನರ್ಮ್ ಯೋಜನೆಯಲ್ಲಿ ಮೊದಲಿಗೆ ಬಸ್‌ಗಳನ್ನು ರಸ್ತೆಗಿಳಿಸಿದ್ದೂ ರಾಜ್ಯವೇ' ಎಂದರು.

ಗ್ರಾಮಕ್ಕೊಂದು ಬಸ್: ಪ್ರತಿ ಗ್ರಾಮಕ್ಕೂ ಬಸ್ ಬಿಡಬೇಕೆಂಬುದು ನಮ್ಮ ಗುರಿ. ಅದಕ್ಕಾಗಿ ಸಚಿವ ಸಿ.ಪಿ. ಜೋಶಿ ಅವರನ್ನು ಭೇಟಿ ಮಾಡಲಾಯಿತು. ಗ್ರಾಮಕ್ಕೊಂದು ಹಾಲ್ಟಿಂಗ್ ಬಸ್ ಇರಬೇಕು. ಇದರಿಂದ ನಗರಕ್ಕೆ ವಲಸೆ ತಪ್ಪಿಸಬಹುದು. ಗ್ರಾಮದ ಅಭಿವೃದ್ಧಿಯೂ ಆಗುತ್ತದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಚಾಲಕರ ತರಬೇತಿಗೆ ಅವಕಾಶ ಮಾಡಿಕೊಟ್ಟರೆ ಉತ್ತಮ ಎಂಬುದನ್ನು ಸಚಿವರ ಗಮನಕ್ಕೆ ತರಲಾಗಿದೆ
ಎಂದು ಅಶೋಕ್ ತಿಳಿಸಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X