ಪ್ರಮೋದ್ ಮಹಾಜನ್ ಕೊಲೆಗೆ ಸಮರ್ಥನೆ

Praveen Mahajan
ಮುಂಬೈ, ಡಿ. 4 : ಪರೋಲ್ ಮೇಲೆ ಜೈಲಿನಿಂದ ಹೊರಗೆ ಬಂದಿರುವ ಬಿಜೆಪಿ ಹಿರಿಯ ಮುಖಂಡ ಪ್ರಮೋದ್ ಮಹಾಜನ್ ಅವರ ಸಹೋದರ ಪ್ರವೀಣ್ ಮಹಾಜನ್ ಅಣ್ಣನನ್ನು ಕೊಲೆ ಮಾಡಿ ಸರಿ ಮಾಡಿದ್ದೇನೆ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಖಾಸಗಿ ಟಿವಿ ವಾಹಿನಿಯೊಂದಕ್ಕೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಪ್ರವೀಣ್, ಅಣ್ಣ ದಿವಂಗತ ಪ್ರಮೋದ್ ಮಹಾಜನ್ ಅವರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪ್ರಮೋದ್ ಮೇಲೆ ಗುಂಡು ಹಾರಿಸಿದ್ದೊಂದು ಆಕಸ್ಮಿಕ ಘಟನೆ, ಇದರಲ್ಲಿ ಕೊಲೆ ಮಾಡಬೇಕು ಎಂಬ ಉದ್ದೇಶ ಇರಲಿಲ್ಲ. ಆದರೆ, ದುರ್ಘಟನೆ ನಡೆದು ಹೋಯಿತು. ನಂತರ ನನಗೆ ಅದೇ ಸರಿ ಎನಿಸಿತು ಎಂದು ಪ್ರವೀಣ್ ಹೇಳಿದ್ದಾರೆ.

ಅರ್ಥರ್ ರಸ್ತೆಯ ಜೈಲಿನಿಂದ ವೈದ್ಯಕೀಯ ಕಾರಣದ ಮೇಲೆ ಪರೋಲ್ ಮೇಲೆ ಪ್ರವೀಣ್ ಮಹಾಜನ್ ಹೊರಗೆ ಬಂದಿದ್ದಾರೆ. ಪ್ರವೀಣ್ ಮಹಾಜನ್ ಜೈಲಿಂದ ಹೊರಗೆ ಬಂದು ತಮ್ಮನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಪ್ರವೀಣ್ ಪರ ವಕೀಲ ತುಳಸಿ ಪ್ರತಿಕ್ರಿಯಿಸಿದ್ದಾರೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+