ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈನಲ್ಲಿ ಆರ್ಥಿಕ ಕುಸಿತ, ಪಿಂಕ್ ಸ್ಲಿಪ್ ಭೀತಿ

By Staff
|
Google Oneindia Kannada News

Dubai debt meltdown -- another financial crisis?
ಮೀರತ್, ನ. 30 : ಜಾಗತಿಕ ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ದುಬೈ ಸೇರಿದಂತೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಆರ್ಥಿಕ ಕುಸಿತ ಹಣಕಾಸು ವಲಯದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ. ತೈಲೋದ್ಯಮಿಗಳ ಸ್ವರ್ಗ ಹಾಗೂ ಶ್ರೀಮಂತರ ತವರೂರು ಎಂದು ಕರೆಯಲಾಗುತ್ತಿದ್ದ ದುಬೈ ಆರ್ಥಿಕ ಕುಸಿತದಿಂದ ಕಂಗೆಟ್ಟು ಹೋಗಿದೆ. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಮಂದಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈಗಾಗಲೇ ಅನೇಕ ಮಂದಿಗೆ ಇಮೇಲ್ ಮತ್ತು ಎಸ್ಎಂಎಸ್ ಮೂಲಕ ಕೆಲಸದಿಂದ ತೆಗೆದು ಹಾಕಿರುವ ಸಂದೇಶ ರವಾನಿಸಲಾಗಿದೆ.

ಭೂಮಿಯ ಮೇಲಿರುವ ಕುಬೇರರ ನಾಡು ಎಂಬ ಗೌರವಕ್ಕೆ ಪಾತ್ರವಾಗಿದ್ದ ದುಬೈ ಎಂದೂ ಕಾಣದಂತಹ ಆರ್ಥಿಕ ಕುಸಿತ ಎದುರಿಸತೊಡಗಿದೆ. ದುಬೈನ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈಗಾಗಲೇ ಕೆಲಸದಿಂದ ತೆಗೆದು ಹಾಕಿರುವ ಸಂದೇಶಗಳು ನೂರಾರು ಮಂದಿ ಕೆಳಮಟ್ಟದ ನೌಕರರಿಗೆ ಇಮೇಲ್ ಮತ್ತು ಎಸ್ಎಂಎಸ್ ಮೂಲಕ ತಲುಪಿವೆ.

ಅರಬ್ ದೇಶಗಳಲ್ಲಿ ಹೆಚ್ಚಾಗಿ ಕೇರಳಿಯರು ಕೆಲಸ ಮಾಡುತ್ತಿದ್ದು, ಆಂಧ್ರಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಮುಂಬೈ ರಾಜ್ಯದವರೂ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದೆಡೆ ಕೆಲಸ ಕಳೆದುಕೊಂಡು ಸಪ್ಪೆ ಮುಖ ಹೊತ್ತುಕೊಂಡು ಸ್ವದೇಶಕ್ಕೆ ಆಗಮಿಸುತ್ತಿರುವವರ ಪ್ರವಾಹವೇ ಕಂಡ ಬರುತ್ತಿದೆ. ಆದರೆ, ಭಾರತದ ಘನ ಸರಕಾರ ಮಾತ್ರ, ದುಬೈನಲ್ಲಿ ಆಗಿರುವ ಆರ್ಥಿಕ ಕುಸಿತಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸತೊಡಗಿದೆ. ದುಬೈ ಆರ್ಥಿಕ ಕುಸಿತದಿಂದ ಭಾರತ ಹಣಕಾಸು ಪರಿಸ್ಥಿತಿ ಮೇಲೆ ಪರಿಣಾಮ ಬೀರದು ಎಂಬ ಮಾತುಗಳು ಸರಕಾರದ ಕಡೆಯಿಂದ ಇಲ್ಲಿವರೆಗೆ ಬಂದಿವೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X