ಬಾಬ್ರಿ ಧ್ವಂಸ, ಅಟಲ್ ಕೂಡ ಭಾಗಿ: ವಿಎಚ್ ಪಿ

ಬಾಬ್ರಿ ಮಸೀದಿ ದ್ವಂಸ ಪ್ರಕರಣ ದಲ್ಲಿ ವಾಜಪೇಯಿ ಸೇರಿದಂತೆ 68 ಮಂದಿಯನ್ನು ಆರೋಪಿಗಳೆಂದು ಲಿಬರ್ಹಾನ್ ವರದಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಂಘಾಲ್, ವಾಜಪೇಯಿ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರಿಗೂ ಆಂದೋಲನಕ್ಕೂ ಸಂಬಂಧವಿರಲಿಲ್ಲ ಎಂದು ನಾನು ಹೇಳಲಾರೆ. ಆಂದೋಲನಕ್ಕೆ ಕೈ ಜೋಡಿಸಿದ್ದ ಅವರನ್ನು ಲಕ್ನೋದಲ್ಲಿ ಪೊಲೀಸರು ಬಂಧಿಸಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಹಿಂದೂ ಮುಸ್ಲಿಮರ ನಡುವೆ ಶಾಶ್ವತ ಸ್ನೇಹ ಬೆಸೆಯಬೇಕು ಎಂಬುದನ್ನು ವಿಎಚ್ ಪಿ ಬಯಸುತ್ತದೆ. ಅಯೋಧ್ಯೆ ರಾಮಜನ್ಮಭೂಮಿ, ಮಥುರಾದ ಕೃಷ್ಣ ಜನ್ಮಭೂಮಿ ಹಾಗೂ ಕಾಶಿ ವಿಶ್ವನಾಥ ಸನ್ನಿಧಿಗಳಲ್ಲಿ ತಮ್ಮ ಹಸ್ತಕ್ಷೇಪವನ್ನು ಮುಸ್ಲಿಮರು ಬಿಡಬೇಕು. ಅಲ್ಲದೆ ಸಂಸತ್ತಿನಲ್ಲಿ ಕಾನೂನು ರೂಪಿಸುವ ಮೂಲಕ ಈ ಮೂರು ದೇಗುಲಗಳನ್ನು ನಿರ್ಮಿಸುವ ಅಧಿಕಾರವನ್ನು ಹಿಂದೂಗಳಿಗೆ ನೀಡಬೇಕು ಆಗಷ್ಟೇ ಶಾಂತಿ ನೆಲೆಸಲು ಸಾಧ್ಯ ಎಂದು ಸಿಂಘಾಲ್ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications