ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ಕಾವೇರಿ ವಿಗ್ರಹ ಪತ್ತೆ

By Staff
|
Google Oneindia Kannada News

River Cauvery
ಮಡಿಕೇರಿ, ನ. 27 : ದಕ್ಷಿಣ ಭಾರತದ ಪ್ರಮುಖ ನದಿ ಕಾವೇರಿ ಮಾತೆಯ ಪ್ರಾಚೀನ ವಿಗ್ರಹವೊಂದು ಮಡಿಕೇರಿಯಲ್ಲಿ ಪತ್ತೆಯಾಗಿದೆ. ಇಲ್ಲಿನ ಕೋಟೆಯ ಆವರಣದಲ್ಲಿ ವಿಗ್ರಹ ಪತ್ತೆಯಾಗಿದ್ದು, ಕಾವೇರಿ ನದಿ ಮತ್ತು ಮಾತೆಯ ಕೃಪೆಯಿಂದ ಧನ್ಯರಾದವರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ರಾಜ್ಯ ಪ್ರವಾಸೋದ್ಯಮ ಇಲಾಖೆಯು ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಕಾಮಗಾರಿ ಕೆಲಸಗಳನ್ನು ಕೈಗೊಂಡಿತ್ತು. ಕೋಟೆಯ ಆವರಣದಲ್ಲಿ ಉದ್ಯಾನ ನಿರ್ಮಿಸುವ ಉದ್ದೇಶದಿಂದ ಭೂಮಿ ಅಗೆಯುತ್ತಿದ್ದಾಗ ಗಿಡಗಂಟಿಗಳ ನಡುವೆ ಮಣ್ಣಿನಲ್ಲಿ ಅರ್ಧ ಹೂತುಹೋಗಿದ್ದ ವಿಗ್ರಹ ಕಾಣಿಸಿತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಯಾರಿಗೂ ಈ ಕಾವೇರಿ ವಿಗ್ರಹದ ಸುಳಿವೇ ಇರಲಿಲ್ಲ. ಕೋಟೆ ಅವರಣದ ಸುತ್ತ ಸರಕಾರಿ ಕಚೇರಿಗಳು, ನ್ಯಾಯಾಲಯದ ಕಟ್ಟಡಗಳಿವೆ. ಯಾರ ಗಮನಕ್ಕೂ ಬಾರದಿದ್ದ ಇದು ಪಾರ್ಕ್ ನಿರ್ಮಿಸುವ ಗುತ್ತಿಗೆದಾರರ ಕಣ್ಣಿಗೆ ಬಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಗುತ್ತಿಗೆದಾರರು ವಿಗ್ರಹವನ್ನು ಶುಚಿಗೊಳಿಸಿ, ಅಂದಮಾಡಿ ಉದ್ಯಾನವನದ ಪ್ರಮುಖ ಸ್ಥಳದಲ್ಲಿ ನೆಲೆಗೊಳಿಸಿದರು.

ಸುದ್ದಿ ತಿಳಿದು ಸಂತಸ ವ್ಯಕ್ತಪಡಿಸಿದ ರಾಜಕಾರಣಿ ಎಂ ಸಿ ನಾಣಯ್ಯ ಅವರು, ಪಾರ್ಕಿನ ಅಭಿವೃದ್ದಿಗೆ ಒಂದು ಲಕ್ಷ ರೂಪಾಯಿಯನ್ನು ಶಾಸಕರ ಅನುದಾನ ಖಾತೆಯಿಂದ ಬಿಡುಗಡೆ ಮಾಡುವುದಾಗಿ ಘೋಷಿಸಿದರು. ವಿಗ್ರಹವನ್ನು ಕಣ್ಣಾರೆ ಕಾಣಲು ಸುತ್ತಮುತ್ತ ಊರಿನ ಜನತೆ ಮಡಿಕೇರಿಯ ಬಸ್ಸು ಹತ್ತುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X