ಕಾರ್ಟೂನ್ ಬರೆಯಿರಿ, ಲ್ಯಾಪ್ ಟಾಪ್ ಗೆಲ್ಲಿ

Sample Cartoon
ಬೆಂಗಳೂರು, ನ. 26: ಕ್ರಿಯಾಶೀಲರಿಗೆ, ಕುಚೋದ್ಯ ಪರಿಣತರಿಗೆ ಹಾಗೂ ಪರಿಸರ ಸ್ನೇಹಿ ಯುವಕರಿಗೆ ಒಂದು ಸದಭಿರುಚಿಯ ಕಲಾ ಸ್ಪರ್ಧೆಯನ್ನು ಬ್ರಿಟಿಷ್ ಕೌನ್ಸಿಲ್ ಏರ್ಪಡಿಸಿದೆ. ತನ್ನ 75 ವರ್ಷದ ಸಂಭ್ರಮಾಚರಣೆಯ ಅಂಗವಾಗಿ 'ನಗರ ಪರಿಸರದಲ್ಲಿ ಹವಾಮಾನ ಬದಲಾವಣೆ' ಎಂಬ ವಿಷಯವಾಗಿ ಕಾರ್ಟೂನ್ ರಚನೆ ಸ್ಪರ್ಧೆಯನ್ನು ಆಯೋಜಿಸಿದೆ. ನಗರ ಪರಿಸರದಲ್ಲಿ ಹವಾಮಾನ ಬದಲಾವಣೆ ಎಂಬ ವಿಷಯದ ಮೇಲೆ ಬಿಟ್ರಿಷ್ ಕೌನ್ಸಿಲ್ ನ Low Carbon Futures Project ಕೇಂದ್ರಿಕೃತವಾಗಿ ಕಾರ್ಯ ನಿರ್ವಹಿಸುತ್ತಿದೆ.

ಕಾರ್ಟೂನ್ ರಚಿಸುವವರಿಗೆ ವಿಷಯಗಳು:
* ಬರ ಹಾಗೂ ನೀರಿನ ಅಭಾವ
* ಹಿಮ ಟೋಪಿ(Ice Caps ) ಕರಗುವಿಕೆ
* ಪರಿಸರ ಮಾಲಿನ್ಯದಲ್ಲಿ ಕಾರ್ಖಾನೆಯ ಪಾಲು
* ಸಮುದ್ರ ಹಾಗೂ ಅದನ್ನು ಅವಲಂಬಿತ ಜೀವ ವೈವಿಧ್ಯದ ನಾಶ
* ನಗರ ಪರಿಸರದಲ್ಲಿ ಹವಾಮಾನ ಬದಲಾವಣೆ

ಅರ್ಹತೆ:
ಭಾರತೀಯ ನಾಗರೀಕರಾಗಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.

ನಿಯಮಾವಳಿಗಳು:
*ಕಾರ್ಟೂನ್ ಗಳನ್ನು ಕೈಯಿಂದ ರಚಿಸಿರಬೇಕು
* ಪ್ರತಿಗಳನ್ನು ಮುದ್ರಿಸಿ ಅಥವಾ ಸ್ಕ್ರಾನ್ ಪ್ರತಿಗಳನ್ನು high resolution (minimum 640x480 pixels) ಇಮೇಲ್ ಮೂಲಕ ಕಳಿಸಬಹುದು.
* ಕಾರ್ಟೂನ್ ಗಳು ಕಪ್ಪು ಮತ್ತು ಬಿಳುಪು ವರ್ಣದಾಗಿರಬೇಕು.
* ಬಿಳಿಚಾರ್ಟ್ ಕಾಗದ (size 12 x 15 inches) ink and brush/ Black Felt Pen/Charcoal.ಬಳಸಿ ಕಾರ್ಟೂನ್ ರಚಿಸತಕ್ಕದ್ದು.
* ಒಬ್ಬರಿಂದ ಒಂದು ಅರ್ಜಿ ಮಾತ್ರ ಸ್ವೀಕಾರ.
* ರಚನೆಗಳು ಸ್ವಂತದ್ದಾಗಿರಬೇಕು.ನಕಲು ಮಾಡಿದ ಪ್ರತಿಗಳು ಎಂದು ಕಂಡುಬಂದರೆ, ಪ್ರತಿಯನ್ನು ಅನರ್ಹಗೊಳಿಸಲಾಗುವುದು.
* ಅಂಚೆ/ ಕೊರಿಯರ್ ಮುಖಾಂತರ ಪ್ರತಿಗಳನ್ನು ಕಳುಹಿಸುವವರು ಪ್ರತಿಗಳನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಿ ಕಳಿಸಿರಿ.

ಬಹುಮಾನ:
ಅತ್ಯುತ್ತಮ ರಚನೆಗಳಿಗೆ
ಮೊದಲ ಬಹುಮಾನ: ಲ್ಯಾಪ್ ಟ್ಯಾಪ್
ಎರಡನೆ ಬಹುಮಾನ: ಸ್ಮಾರ್ಟ್ ಫೋನ್
ಮೂರನೆ ಬಹುಮಾನ: ಐ ಪೋಡ್

ಅರ್ಜಿಗಳನ್ನು ಕಳಿಸಲು ಕೊನೆ ದಿನಾಂಕ: 30 ನವೆಂಬರ್ 2009

ಅಂಚೆ ಮುಖಾಂತರ ಕಳಿಸಲು ವಿಳಾಸ:
Reesha Alvi
British Council
17, Kasturba Gandhi Marg
New Delhi 110001

ಇಮೇಲ್ ಮುಖಾಂತರ ಕಳಿಸಲು ವಿಳಾಸ: [email protected]

ಅಂತಿಮ ನಿರ್ಣಯ ಬ್ರಿಟಿಷ್ ಕೌನ್ಸಿಲ್ ಗೆ ಸೇರಿದ್ದು. ಆಯ್ಕೆಯಾದ ಕಾರ್ಟೂನ್ ಗಳನ್ನು ಬ್ರಿಟಿಷ್ ಕೌನ್ಸಿಲ್ ಹಾಗೂ ಕೆನ್ ಸ್ರಾಗ್ ಫಂಡ್ ಸಂಸ್ಥೆ ತನ್ನ ವೆಬ್ ತಾಣದಲ್ಲಿ ಅಥವಾ ಮುದ್ರಿತ ಲೇಖನಗಳಲ್ಲಿ ಬಳಸಿಕೊಳ್ಳಬಹುದಾಗಿದೆ. ವಿಜೇತ ಕಾರ್ಟೂನ್ ರಚನೆಗಳನ್ನು ಭಾರತದ 9 ನಗರಗಳಲ್ಲಿ ಪ್ರದರ್ಶನ ಮಾಡಲಾಗುವುದು.

ಹೆಚ್ಚಿನ ವಿವರಗಳಿಗೆ: [email protected]

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+