ಸಂಸತ್ತಿನಲ್ಲಿ ಲಿಬರ್ಹಾನ್ ವರದಿ ಮಂಡನೆ

ಗೃಹ ಸಚಿವ ಪಿ ಚಿದಂಬರಂ ಅವರು 900 ಪುಟಗಳ ಲಿಬರ್ಹಾನ್ ಆಯೋಗದ ವರದಿಯ ಇಂಗ್ಲಿಷ್ ಅವತರಣಿಕೆಯನ್ನು ಬಿಡುಗಡೆ ಮಾಡಿದರು. ವರದಿಯಲ್ಲಿ ದಾಖಲಿಸಿರುವಂತೆ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ, ಪ್ರತಿಪಕ್ಷದ ನಾಯಕ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್, ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ, ಉಮಾಭಾರತಿ, ವಿಎಚ್ ಪಿಯ ಆಚಾರ್ಯ ಗಿರಿರಾಜ ಕಿಶೋರ್, ಪ್ರವೀಣಬಾಯಿ ತೂಗಾಡಿಯಾ, ದಿವಂಗತ ವಿಜಯ್ ರಾಜೇ ಸಿಂಧಿಯಾ, ಪ್ರಮೋದ್ ಮಹಾಜನ್, ಮಾಜಿ ಕೇಂದ್ರ ಮಂತ್ರಿ ಶಂಕರ್ ಸಿಂಗ್ ವಾಘೇಲಾ, ಕೆ ಸುದರ್ಶನ್, ಗೋವಿಂದಾಚಾರ್ಯ, ಎಸ್ ಪಿ ಸಿಂಘಾಲ್, ವಿನಯ್ ಕಟಿಯಾರ್, ಅಶೋಕ್ ಸಿಂಘಾಲ್, ಲಲಿತ್ ಟಂಡನ್, ಪುರುಷೋತ್ತಮ ನಾರಾಯಣ ಸಿಂಗ್, ಎಚ್ ಪಿ ಶೇಷಾದ್ರಿ, ರಾಜೇಂದ್ರ ಗುಪ್ತಾ, ನಿವೃತ್ತ ಪೊಲೀಸ್ ಐಜಿ ಎ ಕೆ ಶರಣ್, ಉತ್ತರ ಪ್ರದೇಶದ ಮಾಜಿ ಪ್ರವಾಸೋಧ್ಯಮ ಕಾರ್ಯದರ್ಶಿ ಎ ಸಿಂಹ್ ವರದಿಯಲ್ಲಿರುವ ಪ್ರಮುಖ ಹೆಸರುಗಳು.
ಭಾನುವಾರ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಸೋರಿಕೆಯಾಗಿದ್ದ ಎಲ್ಲ ಹೆಸರುಗಳು ಆಯೋಗದ ಪಟ್ಟಿಯಲ್ಲಿವೆ. ಅದಂ ಮೇಲೆ ಪತ್ರಿಕೆಗಳಿಗೆ ಸೋರಿಕೆಯಾಗಲು ಕಾಂಗ್ರೆಸ್ ಪಕ್ಷ ಕಾರಣ ಎಂದು ಇಂದು ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಯಾಯಿತು. ಮೇಲಿರುವ ಹೆಸರುಗಳಲ್ಲಿ ಅಡ್ವಾಣಿ ಅವರಿಗೆ ಬಾಬ್ರಿ ಧ್ವಂಸದ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಆದರೆ, ಅಟಲ್ ಬಿಹಾರಿ ವಾಜಪೇಯಿ ಮೃದುಧೋರಣೆ ತಾಳಿದ್ದರು. ಬಾಳಾ ಠಾಕ್ರೆ, ಉಮಾಭಾರತಿ ಸಂಘ ಪರಿವಾಹದ ಹಿರಿಯ ಇದನ್ನು ಬೆಂಬಲಿಸಿದ್ದರು ಎಂದು ಎನ್ ಎಸ್ ಲಿಬರ್ಹಾನ್ ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ.












Click it and Unblock the Notifications