ಕರ್ನಾಟಕ ಮುಸ್ಲಿಮರಿಗೆ ಯಡ್ಡಿ ಕರೆ

ತಾವು ಯಾವುದೇ ಧರ್ಮ, ಸಮುದಾಯದವರಿಗೆ ತಾರತಮ್ಯ ಮಾಡಿಲ್ಲ. ಎಲ್ಲ ಧರ್ಮಗಳನ್ನು ಸಮಾನ ಎಂದು ಭಾವಿಸಿದ್ದು, ಹಜ್ ಯಾತ್ರಿಗಳಿಗೆ ಸರಕಾರ ವಿಶೇಷ ಅಧ್ಯತೆಯೊಂದಿಗೆ ಅನುದಾನ ನೀಡಿದೆ ಎಂದು ಹೇಳಿದರು. ಮುಸ್ಲಿಂ ಬಾಂಧವರು ಹಜ್ ಯಾತ್ರೆ ಸಂದರ್ಭದಲ್ಲಿ ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಸಂತ್ರಸ್ತ ಜನರಿಗಾಗಿ ವಿಶೇಷ ಪ್ರಾರ್ಥನೆ ಮಾಡುವಂತೆ ಹೇಳಿದ ಅವರು, ನಾವೆಲ್ಲರೂ ಭಾರತೀಯರು, ದೇಶಪ್ರೇಮ ನಮ್ಮಲ್ಲಿರಬೇಕು ಎಂದು ಅವರು ಕಿವಿಮಾತು ಹೇಳಿದರು.
ಹಜ್ ಸಮಿತಿಗೆ ಪಾರದರ್ಶಕವಾಗಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಕಳೆದ ಬಜೆಟ್ ನಲ್ಲಿ 186 ಕೋಟಿ ರುಪಾಯಿ ಸಮಿತಿಗಾಗಿ ಮೀಸಲಿಡಲಾಗಿದೆ. ಈ ಪೈಕಿ ಈ ವರ್ಷ ಹಜ್ ಯಾತ್ರೆಗಾಗಿ 5 ಕೋಟಿ ರುಪಾಯಿ ಬಿಡುಗಡೆ ಮಾಡಿರುವುದಾಗಿ ಯಡಿಯೂರಪ್ಪ ವಿವರಿಸಿದರು. ಎಲ್ಲ ಧರ್ಮದ ಸಾರ ಒಂದೇ, ಅವರವರ ಭಾವಕ್ಕೆ ತಕ್ಕಂತೆ ದೇಶವನ್ನು ಸಮೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ವಕ್ಫ ಖಾತೆ ಮಮ್ತಾಜ್ ಅಲಿ ಖಾನ್ ಸೇರಿದಂತೆ ಸಮುದಾಯದ ವಿವಿಧ ಮುಖಂಡರು ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications