ಮುಸ್ಲಿಮರು ಮೂಲತಃ ಹಿಂದೂಗಳು : ಭಾಗವತ್

Mohan Bhagawath
ಬೆಂಗಳೂರು, ಮ. 23 : ಭಾರತ ಹಿಂದೂಗಳ ರಾಷ್ಟ್ರ. ಭಾರತದಲ್ಲಿರುವ ಮುಸ್ಲಿಮರು, ಕ್ರಿಶ್ಚಿಯನ್ನರು ಮೂಲತಃ ಹಿಂದೂಗಳು. ಆದ್ದರಿಂದ ಭಾರತದಲ್ಲಿರುವ ಎಲ್ಲರೂ ಹಿಂದೂ ಧರ್ಮದ ವಿಧಿವಿಧಾನವನ್ನು ಪರಿಪಾಲಿಸುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ನಡೆದ ಆರ್ಎಸ್ಎಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಅವರು, ಭಾರತವೆಂದರೆ ಹಿಂದೂಗಳ ನಾಡು ಎಂದು ಪ್ರತಿಪಾದಿಸಿದರು. ಭಾರತ ಹಿಂದೂರಾಷ್ಟ್ರ, ಇಲ್ಲಿ ವಾಸವಿರುವ ಮುಸ್ಲಿಂ, ಕ್ರೈಸ್ತರ ಪೂರ್ವ ವಂಶಸ್ಥರು ಸಹ ಹಿಂದೂಗಳೆ. ಅವರ ಮೂಲ ಸಂಸ್ಕೃತಿ ಕೂಡ ಒಂದು ಹಿಂದೂ ಧರ್ಮದ್ದೆ. ಎಲ್ಲರೂ ಈ ದೇಶದ ಮಕ್ಕಳೆ. ಆದರೆ, ಧಾರ್ಮಿಕ ಆಚರಣೆಗಳು ಮಾತ್ರವೇ ಭಿನ್ನ ಎಂದು ಅವರು ಹೇಳಿದರು.

ಹಿಂದುಗಳು, ಹಿಂದುತ್ವದ ಪ್ರಭಾವ ಕಡಿಮೆಯಾದ ಕಾರಣದಿಂದಲೇ ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾದೇಶ ಮುಂತಾದವು ಜನ್ಮ ತಳೆದವು. ಹಿಂದೂತ್ವದ ಮೂಲಕ ಒಗ್ಗಟ್ಟು ಮೂಡಿಸುವುದರ ಜೊತೆಗೆ ಅಖಂಡ ಭಾರತ ನಿರ್ಮಾಣದತ್ತ ಮುನ್ನೆಡೆಯಬೇಕಿದೆ ಎಂದು ಭಾಗವತ್ ಕರೆ ನೀಡಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+