ತರೀಕೆರೆ ಏರಿಮೇಲೆ ಚಿರತೆಮರಿ

ಮೇಕೆ ಮರಿಗಳನ್ನು ಹುಡುಕಿಕೊಂಡು ಹೊರಟ ರೈತ ರಮೇಶ ಎಂಬುವವರಿಗೆ ತಮ್ಮ ತೋಟದ ಮೂಲೆಯೊಂದರಲ್ಲಿ ಕೇಳಿ ಬಂದ ಬುಸುಗುಡುವ ಶಬ್ದ ಕೇಳಿ ಅನುಮಾನಗೊಂಡರು. ಇಣುಕಿ ನೋಡಿಗಾದ ಅರ್ಧ ಭಾಗ ಛಿದ್ರಗೊಂಡ ಮೇಕೆಯ ಶವದ ಬಳಿ ಚಿರತೆ ಮರಿಗಳು ಆಡುತ್ತಿದ್ದವು.
ನಂತರ ರಮೇಶ್ ಅವರು ತಕ್ಷಣ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ತರೀಕೆರೆಯ ವೃತ್ತ ನೀರಿಕ್ಷಕ ಶರಣಪ್ಪ ಮತ್ತು ಸಿಬ್ಬಂದಿ ವರ್ಗ ಹಾಗು ಅರಣ್ಯ ಅಧಿಕಾರಿಗಳು ಚಿರತೆ ಮರಿಗಳಿಗೆ ಹಾಲು ಕುಡಿಸಿ ತರೀಕೆರೆ ಕಾಡಿನಲ್ಲಿ ಬಿಟ್ಟು ಬಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications